ಸಿಂಪಲ್ ಗಣಿಧಣಿ: ಜನರ ಮನಸ್ಸು ಗೆದ್ದ ಸಂತೋಷ ಲಾಡ..!

ಧಾರವಾಡ: ಆ ವೇದಿಕೆಯನ್ನ ಸಿದ್ಧ ಮಾಡಲು ಕಣ್ಸನ್ನೇ ಮಾಡಿದ್ದರೂ ಸಾಕಿತ್ತು. ನೂರಾರು ಜನರು ಅದನ್ನ ಮಾಡಿ ಮುಗಿಸಿಬಿಡುತ್ತಿದ್ದರು. ಆದರೆ, ಅದನ್ನ ಅವರು ಮಾಡಲಿಲ್ಲ. ಮನೆಗೆ ಬಂದ ಅತಿಥಿಗಳನ್ನ ತಾವೇ ಸತ್ಕರಿಸಬೇಕಾಗಿದ್ದರಿಂದ ತಾವೇ ಮುಂದು ನಿಂತು ಖುರ್ಚಿಗಳನ್ನ ಜೋಡಿಸಿದರು.. ಎಲ್ಲರೂ ಅವರನ್ನೇ ನೋಡುತ್ತಿದ್ದಾರೆ.. ಅಂದ ಹಾಗೇ ಅವರು..
ಈ ವೀಡಿಯೋ ನೋಡಿ..
ಮಾಜಿ ಸಚಿವ ಸಂತೋಷ ಲಾಡ, ಗಣಿಧಣಿ ಎನ್ನುವುದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಹಾಗಂತ, ಎಲ್ಲಿಯೂ ಅದನ್ನ ತೋರಿಸಿಕೊಳ್ಳುವುದಕ್ಕೆ ಹೋಗುವುದೇ ಇಲ್ಲ. ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರ್ತಾರೆ. ಅದಕ್ಕೊಂದು ತಾಜಾ ಉದಾಹರಣೆ ಎಂದರೇ, ಕಲಘಟಗಿಯಲ್ಲಿ ನಡೆದ ಕಾರ್ಯಕ್ರಮ.
ವೇದಿಕೆ ಮೇಲೆ ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆಯಾದವರನ್ನ ಕೂಡಿಸುವುದಕ್ಕೆ ತಾವೇ ಖುರ್ಚಿಗಳನ್ನ ಸರಿ ಪಡಿಸುತ್ತಿದ್ದರು. ಸಂತೋಷ ಲಾಡ ಅವರ ಸರಳತನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಂತೂ ಸತ್ಯ.