ಶಾಣ್ಯಾ ಆದ ವ್ಯಾಪಾರಿಗಳು: ಹುಬ್ಬಳ್ಳಿ ಜನತಾ ಬಜಾರ ತೆರವು
1 min readಹುಬ್ಬಳ್ಳಿ: ನಾಳೆಯವರೆಗೆ ಅಂಗಡಿಗಳನ್ನ ತೆಗೆದುಕೊಳ್ಳದೇ ಇದ್ದರೇ ಜೆಸಿಬಿಯಿಂದ ತೆರವುಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದ ಬೆನ್ನಲ್ಲೆ ಹುಬ್ಬಳ್ಳಿಯ ಪ್ರಸಿದ್ಧ ಜನತಾ ಬಜಾರ ಖಾಲಿಯಾಗುತ್ತಿದೆ.
ಬಹುತೇಕ ಗ್ರಾಮೀಣ ಪ್ರದೇಶ ಹಾಗೂ ಶಹರದ ನೂರಾರೂ ಕುಟುಂಬಗಳಿಗೆ ದಿನಪಯೋಗಿ ವಸ್ತುಗಳನ್ನ ಒದಗಿಸುತ್ತಿದ್ದ ಜನತಾ ಬಜಾರ್ ಇನ್ನೂ ಮುಂದೆ ಹೊಸ ರೂಪದಲ್ಲಿ ಜನ್ಮತಳೆಯಲಿದೆ. ಹೀಗಾಗಿ, ಇಂದಿನಿಂದ ಅದಕ್ಕೊಂದು ಕಾಯಕಲ್ಪ ಆರಂಭಗೊಂಡಿದೆ.
ಜನತಾ ಬಜಾರನಲ್ಲಿನ ಹಣ್ಣು-ತರಕಾರಿ- ಸಿಹಿ ತಿಂಡಿ ತಿನಿಸುಗಳ ಅಂಗಡಿಗಳನ್ನ ಮಾಲೀಕರೇ ತೆಗೆದು ಹಾಕುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವನ್ನ ವಹಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ.
ಇಂದು ಬೆಳಿಗ್ಗೆಯಿಂದಲೇ ಹಲವು ಅಂಗಡಿಕಾರರು, ತಮ್ಮ ವಸ್ತುಗಳನ್ನ ಬೇರೆ ಕಡೆ ಸ್ಥಳಾಂತರ ಮಾಡುತ್ತಿದ್ದು, ನಾಳೆಯವರೆಗೆ ಸಂಪೂರ್ಣವಾಗಿ ಜನತ ಬಜಾರ್ ಖಾಲಿಯಾಗಲಿದೆ. ಇದಾದ ನಂತರ ಹೊಸ ರೂಪಕ್ಕೆ ಚಾಲನೆ ದೊರೆಯಲಿದೆ.