2ಸಾವಿರ ರೂಪಾಯಿಗಾಗಿ ಪಿಡಿಓ ಎಸಿಬಿ ಬಲೆಗೆ
1 min readಕಲಬುರಗಿ: ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದ ಗ್ರಾಮ ಪಂಚಾಯತಿ ಪಿಡಿಓರನ್ನ ಎಸಿಬಿಗೆ ಸಿಲುಕಿಸಿರುವ ಪ್ರಕರಣವೊಂದು ಜೇವರ್ಗಿ ತಾಲೂಕಿನ ಕೆಲ್ಲೂರ ಗ್ರಾಮದಲ್ಲಿ ನಡೆದಿದೆ.
ಕೆಲ್ಲೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಭಾಷ ಹೊಸಮನಿ ಎಂಬ ವ್ಯಕ್ತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಳಿ ಮಾಡಿರುವ ಭ್ರಷ್ಟಾಚಾರ ನಿಗ್ರಹ ದಳದ ತಂಡ, ಪಿಡಿಓ ಗಂಗಾಧರ ಅವರ ಮೇಲೆ ದಾಳಿ ಮಾಡಿ, ಕಾನೂನು ಕ್ರಮ ಜರುಗಿಸಿದೆ.
ಪಿಡಿಓ ಗಂಗಾಧರ ಅವರ ಬಳಿ ಅಲೆದು ಅಲೆದು ಸುಸ್ತಾಗಿದ್ದ ಸುಭಾಷ್, ಎಸಿಬಿ ಬಳಿ ತನಗಾದ ನೋವನ್ನ ಹೇಳಿಕೊಂಡಿದ್ದರು. ಇದಾದ ನಂತರ ಕ್ರಮ ಜರುಗಿಸಿದ ಎಸಿಬಿ ತಂಡ, 2 ಸಾವಿರ ರೂಪಾಯಿ ಹಣ ಪಡೆಯುವಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಗ್ರಾಮ ಪಂಚಾಯತಿಗಳಲ್ಲಿ ಸದಸ್ಯರು ಇಲ್ಲದೇ ಇರುವುದು ಕೂಡಾ, ಲಂಚಗುಳಿತನ ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ. ಪಿಡಿಓ ಅವರನ್ನ ಬಂಧನ ಮಾಡಿರುವ ಎಸಿಬಿ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.