ಬೈಕ್-ಟ್ರ್ಯಾಕ್ಟರ್ ಡಿಕ್ಕಿ- ಸವಾರನ ಕಾಲು ಮುರಿತ
1 min readಹುಬ್ಬಳ್ಳಿ: ಹೊಸ ಬೈಕು ತೆಗೆದುಕೊಂಡ ಹುಮ್ಮಸ್ಸಿನಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕನೋರ್ವ ಟ್ರ್ಯಾಕ್ಟರಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರನಾಗಿದ್ದ ಯುವಕನ ಅಜ್ಜ ಕಾಲು ಮುರಿತಕ್ಕೆ ಒಳಗಾದ ಘಟನೆ ಹುಬ್ಬಳ್ಳಿ ಕಾರವಾರ ರಸ್ತೆಯ ಕೆಇಬಿ ಗ್ರೀಡ್ ಬಳಿ ಸಂಭವಿಸಿದೆ.
ಹೊಸ ಬೈಕಿನಲ್ಲಿ ತನ್ನ ಅಜ್ಜನೊಂದಿಗೆ ಜಾಲಿ ರೈಡ್ ಮಾಡುತ್ತಿದ್ದ ಯುವಕ, ಅಜ್ಜ ಗುರುನಾಥ ಸಾಲಿಯ ಕಾಲು ಮುರಿಯುವಂತೆ ಸವಾರಿ ಮಾಡಿದ್ದಾನೆ. ಮನೆಯಲ್ಲಿ ಹೇಳಿದರೂ ಬೈಕಿನಲ್ಲಿ ತಿರುಗುವುದನ್ನ ಬಿಡದೇ, ಇಂದು ಕೂಡಾ ಹೊರಗೆ ಬಂದಾಗ ಈ ಘಟನೆ ನಡೆದಿದೆ.
ಹುಬ್ಬಳ್ಳಿಯ ಗುರುನಾಥ ಸಾಲಿಗೆ ತೀವ್ರವಾಗಿ ಗಾಯಗಳಾದ ಪರಿಣಾಮ ಕಿಮ್ಸಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದಾರೆ.
ಟ್ರ್ಯಾಕ್ಟರ ನಿಧಾನವಾಗಿ ಹೋಗುತ್ತಿದ್ದ ಸಮಯದಲ್ಲಿ ಓವರ್ ಟೇಕ್ ಮಾಡುತ್ತ ಬಂದ ಬೈಕ ಸವಾರ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ. ಹೀಗಾಗಿ ಈ ದುರ್ಘಟನೆ ನಡೆದಿದೆ. ಟ್ಯಾಕ್ಟರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ನಂಬರ ಮೂಲಕ ಪತ್ತೆಹಚ್ಚುತ್ತಿದ್ದಾರೆ.