ಎಡಿಜಿಪಿ ಪಿ.ರವೀಂದ್ರನಾಥ ರಾಜೀನಾಮೆ- ಎಡಿಜಿಪಿ ಟಿ.ಸುನೀಲಕುಮಾರ ಬಡ್ತಿ ವಿವಾದ
1 min readಬೆಂಗಳೂರು: ರಾಜ್ಯ ಸರಕಾರ ನಿನ್ನೆ ಮೂವರು ಐಪಿಎಸ್ ಗಳಿಗೆ ಬಡ್ತಿ ನೀಡಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಪಿ.ರವೀಂದ್ರನಾಥ ರಾಜೀನಾಮೆ ನೀಡಿದ್ದಾರೆ.
ಐಪಿಎಸ್ ಅಧಿಕಾರಿಯಾಗಿದ್ದ ಎಡಿಜಿಪಿ ಟಿ.ಸುನೀಲಕುಮಾರ ಅವರು ಇಂದು ನಿವೃತ್ತಿಯಾಗಲಿದ್ದು, ನಿನ್ನೆಯಷ್ಟೇ ಅವರಿಗೆ ಬಡ್ತಿಯನ್ನ ನೀಡಲಾಗಿದೆ. ಇದರಿಂದ ಮನನೊಂದ ಎಡಿಜಿಪಿ ಪಿ.ರವೀಂದ್ರನಾಥ ರಾಜೀನಾಮೆ ನೀಡಿದ್ದಾರೆ.
ಇಂದು ನಿವೃತ್ತಿಯಾಗಲಿರುವ ಟಿ.ಸುನೀಲಕುಮಾರ ಹಾಗೂ ಪಿ.ರವೀಂದ್ರನಾಥ ಅವರು ಒಂದೇ ಬ್ಯಾಚಿನವರಾಗಿದ್ದು, ಕಾನೂನು ಬಾಹಿರವಾಗಿ ಅವರಿಗೆ ಬಡ್ತಿ ನೀಡಲಾಗಿದೆ ಎಂದು ಅಸಮಾಧಾನದಿಂದ ರಾಜೀನಾಮೆಯನ್ನ ನೀಡಿದ್ದಾರೆ.
ನಿನ್ನೆ ರಾತ್ರಿ ಕಂಟ್ರೋಲ್ ರೂಂ ಮೂಲಕ ರಾಜೀನಾಮೆ ನೀಡಿರುವ ರವೀಂದ್ರನಾಥ, ಅವರು ಉದ್ದೇಶಪೂರ್ವಕವಾಗಿ ಇಂತಹದನ್ನ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರಂತೆ.