ಹುಬ್ಬಳ್ಳಿ-ಧಾರವಾಡ ಮೂವರು ಅಧಿಕಾರಿಗಳು ಅಮಾನತ್ತು: ಜಿಲ್ಲಾಧಿಕಾರಿ ಆದೇಶ

ಧಾರವಾಡ: ವಿಧಾನಪರಿಷತ್ ಚುನಾವಣೆ ಸಮಯದಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಶಿರಸ್ತೆದಾರ ವಿ.ಎಂ.ಸಾಳುಂಕೆ, ಧಾರವಾಡ ತಹಶೀಲ್ದಾರ ಕಚೇರಿಯ ದ್ವೀತಿಯ ದರ್ಜೆ ಸಹಾಯಕರಾಗಿರುವ ಜಿ.ಬಿ.ಚಂದನಕರ ಹಾಗೂ ಅಡಿವೇಶ ಪರ್ವತಿ ಅಮಾನತ್ತಾದ ನೌಕರರಾಗಿದ್ದಾರೆ.
ಚುನಾವಣೆ ಕಾರ್ಯದಲ್ಲಿ ಕರ್ತವ್ಯಲೋಪ ಮಾಡಿ, ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ನಿಯಮಾಳಿಗಳು, 1957ರ ನಿಯಮ 10(1)(ಎ)ನೇದ್ದರ ಪ್ರಕಾರ ವಿಚಾರಣೆಯನ್ನ ಬಾಕಿಯಿರಿಸಿ ಅಮಾನತ್ತು ಮಾಡಲಾಗಿದೆ.
ಅಮಾನತ್ತಾದ ಅವಧಿಯಲ್ಲಿ ನೌಕರರು ಕಾರ್ಯಾಲಯದ ಪರವಾನಿಗೆ ಪಡೆಯದೇ ಕೇಂದ್ರ ಸ್ಥಾನವನ್ನೂ ಬಿಡುವ ಹಾಕಿಲ್ಲವೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೂಚನೆ ನೀಡಿದ್ದಾರೆ.