Posts Slider

Karnataka Voice

Latest Kannada News

ಅವಳಿನಗರದಲ್ಲಿ ಮತ್ತೆ ಮೂರು ಬೈಕ್ ಕಳ್ಳತನ

1 min read
Spread the love

ಧಾರವಾಡ-ಹುಬ್ಬಳ್ಳಿ: ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳರನ್ನ ಹಿಡಿದ ಬೆನ್ನಲ್ಲೇ ಹುಬ್ಬಳ್ಳಿಯಲ್ಲಿ ಮತ್ತೆ ಮೂರು ಬೈಕ್ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಇವರಿಬ್ಬರನ್ನ ಬಿಟ್ಟು ಇನ್ನೂ ಬೇರೆಯವರು ಬೈಕ್ ಕಳ್ಳರಿದ್ದಾರಾ ಎಂಬ ಪ್ರಶ್ನೆ ಮೂಡುವಂತಾಗಿದೆ.

ಕೇಶ್ವಾಪೂರ ಪೊಲೀಸ್ ಠಾಣೆ- ಮನೆಯ ಮುಂದೆ ನಿಲ್ಲಿಸಿದ್ದ ಕೆಎ-25, ಇಇ-8178 ನಂಬರಿನ ಹೀರೊ ಹೊಂಡಾ ಸ್ಪೆಂಡರ್ ಪ್ಲಸ್ ದ್ವಿಚಕ್ರವಾಹನವನ್ನ ಕಳ್ಳತನ ಮಾಡಿರುವ ಬಗ್ಗೆ ದೂರು ದಾಖಲಾಗಿದೆ.

ಮನೆಯ ಮುಂದೆ ಹ್ಯಾಂಡಲ್ ಲಾಕ್ ಮಾಡಿದ್ದ ಬೈಕ್ ಕಳ್ಳತನ ಮಾಡಿರುವ ಬಗ್ಗೆ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ವಿದ್ಯಾಗಿರಿ ಪೊಲೀಸ್ ಠಾಣೆ- ಧಾರವಾಡದ ಶಂಕರಪುರದ ವೈ.ಎಸ್.ಕಾಲನಿಯ ಮನೆಯ ಮುಂದೆ ನಿಲ್ಲಿಸಿದ್ದ ಹೀರೊ ಹೊಂಡಾ ಸ್ಪೆಂಡ್ಲರ್ ಪ್ಲಸ್ ವಾಹನವನ್ನ ಕಳ್ಳತನ ಮಾಡಲಾಗಿದೆ.

ಕೆಎ-25, ಇಎಂ-3637 ಸಂಖ್ಯೆಯ ದ್ವಿಚಕ್ರವಾಹನ ಕಳ್ಳತನದ ಬಗ್ಗೆ ದೂರು ದಾಖಲು ಮಾಡಿಕೊಂಡು ತನಿಖೆಯನ್ನ ವಿದ್ಯಾಗಿರಿ ಠಾಣೆಯ ಪೊಲೀಸರು ನಡೆಸುತ್ತಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆ- ನಗರದ ಪ್ಯಾಟಿಸಾಲ ಓಣಿಯಲ್ಲಿರುವ ಕಾರ ಶೆಡನಲ್ಲಿ ನಿಲ್ಲಿಸಿದ್ದ ಬೈಕ್ ನ್ನ ಕಳ್ಳತನ ಮಾಡಲಾಗಿರುವ ಬಗ್ಗೆ ದೂರು ದಾಖಲಾಗಿದೆ.

ಕೆಎ-25, ಇಜಿ-4748 ಹೀರೊ ಹೊಂಡಾ ಸ್ಪೆಂಡರ್ ಪ್ರೋ ಬೈಕು ಕಳ್ಳತನವಾಗಿರುವ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆಯನ್ನ ಕೈಗೊಳ್ಳಲಾಗಿದೆ.


Spread the love

Leave a Reply

Your email address will not be published. Required fields are marked *