ಧಾರವಾಡದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಡಿಸಿಎಂಗೆ ಏನು ಕೇಳ್ತಿದ್ದಾರೆ ಗೊತ್ತಾ..?
1 min readಧಾರವಾಡ: ಕಳೆದ 6 ವರ್ಷಗಳಿಂದ ಕವಿವಿಯಲ್ಲಿ ನೇಮಕಾತಿಗಳು ನಡೆದಿಲ್ಲ. ಕೆಇಎ ಮೂಲಕ ನೇಮಕಾತಿಗಳು ನಡೆಯುವುದನ್ನು ನಿಲ್ಲಿಸಿ ಉತ್ತರ ಕರ್ನಾಟಕ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಮನವಿಯನ್ನ ನೀಡಲು ಉದ್ದೇಶಿಸಲಾಗಿದೆ.
ಸಂಶೋಧನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಅವಶ್ಯಕತೆ ಇದ್ದು ಇದುವರೆಗೆ ಕೇವಲ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪಟಾಪ್ ನೀಡಲಾಗಿದೆ. ಇದರಿಂದ ಇನ್ನುಳಿದ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುತ್ತದೆ. ದಯವಿಟ್ಟು ಎಲ್ಲರಿಗೂ ಲ್ಯಾಪ ಟಾಪ್ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.
ಪಿ.ಹೆಚ್.ಡಿ ಸಂಶೋಧಕರಿಗೆ ಈಗ ವಿವಿ ನೀಡುತ್ತಿರುವ 6000 ರೂ ಪ್ರೋತ್ಸಾಹ ಧನವನ್ನು 15000ರೂ ಗಳಿಗೆ ಹೆಚ್ಚಿಸಲು ಆಗ್ರಹಿಸಲಾಗುತ್ತದೆ. ವಿವಿದ ವಿವಿಗಳು ವಿವಿಧ ರೂಪದ ಫೆಲೋಷಿಪ್ ಗಳನ್ನು ನೀಡುತ್ತಾ ಬರುತ್ತಿದ್ದು ರಾಜ್ಯದಲ್ಲಿ ಒಂದು ರಾಜ್ಯ ಒಂದು ಫೆಲೋಷಿಪ್ ನೀತಿ ಜಾರಿಗೆ ತರಲು ಒತ್ತಾಯಿಸಲಾಗುತ್ತದೆಂದು ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಮಿತ್ ಶಿಂಧೆ ಹಾಗೂ ಗೌರವಾಧ್ಯಕ್ಷ ಮಂಜು ಹೊಂಗಲದ ಹಾಗೂ ಕಾರ್ಯದರ್ಶಿ ಮಲ್ಲೇಶ ಚನ್ನಬತ್ತಿ ತಿಳಿಸಿದ್ದಾರೆ.