ಯಾದವಾಡದಲ್ಲಿ ಭಾವೈಕ್ಯತೆ ಬೀಡಾದ ನವರಾತ್ರಿ ಪ್ರವಚನ
1 min readಧಾರವಾಡ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಲಿಂಗೈಕ್ಯ ಪರಮಪೂಜ್ಯ ಶಿಗನಳ್ಳಿಯ ಶ್ರೀ ಗುರು ರಾಚಯ್ಯನವರ 29ನೇ ಶಿವಗಣಾರಾಧನೆಯ ಅಂಗವಾಗಿ ನವರಾತ್ರಿ ಪ್ರವಚನವನ್ನ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು.
ಪ್ರತಿ ವರ್ಷದಂತೆ ಈ ವರ್ಷವೂ ನಿರಂತರ 3ನೇ ವರ್ಷ ಧಾರವಾಡದ ಕೆಲಗೇರಿ ಹಾಗೂ ಬೈಲಹೊಂಗಲ ತಾಲೂಕಿನ ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ್ರು. ಮಹಾಮಾರಿ ಕೊರೋನಾ ಮನುಷ್ಯನ ಜೀವನವನ್ನ ಬೇರೆ ದಾರಿಗೆ ತೆಗೆದುಕೊಂಡು ಹೋಗಿದೆ. ಇಂತಹ ಸಮಯದಲ್ಲಿ ನಾವೇಲ್ಲರೂ ಒಂದಾಗಿ ಜೀವನ ನಡೆಸಬೇಕಿದೆ ಎಂದು ಹೇಳಿದರು.
ಗ್ರಾಮದ ಪ್ರಮುಖರಾದ ಮಡಿವಾಳಪ್ಪ ದಿಂಡಲಕೊಪ್ಪ, ಶೇಖಪ್ಪಾ ಕುಂಬಾರ, ರಾಚಯ್ಯಾ ಹಳ್ಳಿಗೇರಿಮಠ, ಸುರೇಶ ಬೆಂಡಿಗೇರಿ, ಯಲ್ಲಪ್ಪಾ ಬಾರಕೇರ್, ಮಾಬೂಲಿ ದಿಡ್ಡಿ, ವಾಸೀಮ ಅನಸಾರಿ, ಅಲ್ಲಾಭಕ್ಷ ಯಲಿಗಾರ, ಭೀಮಣ್ಣಾ ಯಲಿಗಾರ ಸೇರಿದಂತೆ ಗ್ರಾಮದ ಹಲವರು ಸ್ವಾಮೀಜಿಗಳನ್ನ ಆತ್ಮೀಯವಾಗಿ ಸತ್ಕರಿಸಿದರು.
ಪ್ರವಚನದ ನಂತರ ಆಯೋಜನೆಗೊಂಡಿದ್ದ ಅನ್ನಸಂತರ್ಪಣೆಯಲ್ಲಿ ಎಲ್ಲರೂ ಭಾಗವಹಿಸಿ, ಪ್ರಸಾದ ಸ್ವೀಕರಿಸಿದರು. ಇಡೀ ಕಾರ್ಯಕ್ರಮ ಯಾದವಾಡದಲ್ಲಿ ಹೊಸ ಚೈತನ್ಯ ಮೂಡಿಸುವುದರಲ್ಲಿ ಯಶಸ್ವಿಯಾಗಿದೆ.