ಧಾರವಾಡ ಜಿಲ್ಲೆಯಲ್ಲಿ ಸರಕಾರಿ ಶಾಲೆ ಶಿಕ್ಷಕಿಗೆ ಮದುವೆಯಾಗುವುದಾಗಿ ವಂಚನೆ: ಬಿಇಓ ಕಚೇರಿಯಲ್ಲೇ ನಡೆದಿದೆ ಮೋಸ..?
1 min readಧಾರವಾಡ: ಜಿಲ್ಲೆಯ ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಯುವತಿಯನ್ನ ಮದುವೆಯಾಗುವುದಾಗಿ ಅವಳೊಂದಿಗೆ ಚೆಲ್ಲಾಟವಾಡುತ್ತಿದ್ದ ಸಿಬ್ಬಂದಿಯೋರ್ವ ಕೈ ಬಿಟ್ಟಿರುವ ಪ್ರಕರಣವೊಂದು ನಡೆದಿದ್ದು, ಅದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಹಲವು ವರ್ಷಗಳಿಂದ ಸರಕಾರಿ ಶಾಲೆಯ ಶಿಕ್ಷಕಿಯೊಂದಿಗೆ ತಿರುಗಾಡಿ, ಆಕೆಯನ್ನ ಬಳಕೆ ಮಾಡಿಕೊಂಡು ಮದುವೆಯಾಗುವುದಾಗಿ ಹೇಳಿದ್ದ ಸಿಬ್ಬಂದಿ, ಇತ್ತೀಚಿನ ದಿನಗಳಲ್ಲಿ ಉದ್ದೇಶಪೂರ್ವಕವಾಗಿ ಬಳಕೆ ಮಾಡಿಕೊಂಡು ಕೈ ಬಿಟ್ಟಿದ್ದಾನೆಂದು ಹೇಳಲಾಗಿದೆ.
ಈ ಪ್ರಕರಣವೀಗ ಜಿಲ್ಲೆಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಗೆ ಆಗಿರುವ ಅನ್ಯಾಯವನ್ನ ಸರಿಪಡಿಸಿ ಎಂದು ಬೇಡಿಕೊಂಡು ಮೂವರ ವಿರುದ್ಧ ದೂರು ನೀಡಿದ್ದಾರೆ. ಬಿಇಓ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೆಲವರು ಕುಮ್ಮಕ್ಕು ನೀಡುತ್ತಿದ್ದಾರೆಂದು ದೂರಿನಲ್ಲಿ ವಿವರಣೆ ನೀಡಲಾಗಿದೆ.
ದೂರು ಪಡೆದಿರುವ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಸಿಬ್ಬಂದಿಯನ್ನ ಹಾಗೂ ಆತನಿಗೆ ಸಹಕಾರ ನೀಡುತ್ತಿರುವ ವ್ಯಕ್ತಿಗಳನ್ನ ವಿಚಾರಣೆ ಮಾಡುತ್ತಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.
ಸರಕಾರಿ ಶಾಲೆಯ ಶಿಕ್ಷಕಿ ಪದೇ ಪದೇ ಬಿಇಓ ಕಚೇರಿಗೆ ಹೋಗುತ್ತಿದ್ದ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಬೇರೆ ಥರದ ಸಂಬಂಧಕ್ಕೆ ಕಾರಣವಾಗಿತ್ತು. ಹೀಗಾಗಿ, ತಾವಿಬ್ಬರೂ ಮದುವೆ ಮಾಡಿಕೊಳ್ಳುತ್ತೇವೆ ಎಂದುಕೊಂಡು ಸಮಯವನ್ನ ಕಳೆದಿದ್ದರು. ಆದರೆ, ಬಿಇಓ ಕಚೇರಿ ಸಿಬ್ಬಂದಿ ಮದುವೆ ಎಂದ ತಕ್ಷಣ ಹೀಗೆ ಮಾಡಿರುವುದು ಠಾಣೆಗೆ ಬರುವಂತಾಗಿದೆ.