NWKRTC ಬಸ್-ಬೈಕ್ ಡಿಕ್ಕಿ ಯುವಕನ ದುರ್ಮರಣ
1 min readಹಾವೇರಿ: ವೇಗವಾಗಿ ಬರುತ್ತಿದ್ದ ವಾಯುವ್ಯ ವಾಹಿನಿ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಹಾವೇರಿ ತಾಲೂಕು ಗುತ್ತಲ ಪಟ್ಟಣದ ಬಸಾಪುರ ಗ್ರಾಮದ ಬಳಿ ನಡೆದಿದೆ.
ಮೃತ ಯುವಕನನ್ನ ಆಕಾಶ್ ಮನ್ನಂಗಿ ಎಂದು ಗುರುತಿಸಲಾಗಿದ್ದು, ರಭಸವಾಗಿ ಬಸ್ ಹೊಡೆದ ಪರಿಣಾಮ ಪಕ್ಕದಲಿ ಬೈಕ್ ಸಮೇತ ಹೋಗಿ ಯುವಕ ಬಿದ್ದಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಇದರಿಂದ ಯುವಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಗುತ್ತಲ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಾರಿಗೆ ಬಸ್ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆ ನಡೆದಿದ್ದರಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಕೆಲಕಾಲ ಹೊರಗಡೆ ಬಾರದೇ ಬಸ್ ನಲ್ಲಿಯೇ ಕುಳಿತುಕೊಂಡಿದ್ದರು.