Posts Slider

Karnataka Voice

Latest Kannada News

ಗ್ರೇಟ್ ಅಚೀವರ್ ಸಲೀಮಾ ಮುನವಳ್ಳಿ- ಇದೀಗ ಪಿಎಸೈ

1 min read
Spread the love

ಬೆಳಗಾವಿ: ಓರ್ವ ಯುವತಿ ತಾನು ಸಾಧನೆ ಮಾಡಲೇಬೇಕು ಎಂದು ಕನಸು ಕಂಡು ಅದನ್ನ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಇಲ್ಲೋಬ್ಬರು ತಮ್ಮ ಜ್ಞಾನದಿಂದಲೇ ಐದು ಸರಕಾರಿ ನೌಕರಿಗಳು ಮನೆಗೆ ಬರುವಂತೆ ಮಾಡಿಕೊಂಡು, ಕೊನೆಯಲ್ಲಿ ಪಿಎಸೈ ಆಗಿ ಸೇವೆಗೆ ನಿಂತಿದ್ದಾರೆ. ಅವರು ಯಾರೂ ಅನ್ನೋ ಕುತೂಹಲ ನಿಮಗಿದ್ದರೇ.. ಇದನ್ನ ಪೂರ್ತಿಯಾಗಿ ಓದಿ..

 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಸಲೀಮಾ ಹಟೇಲಸಾಬ ಮುನವಳ್ಳಿ, ಪೊಲೀಸ್ ಇಲಾಖೆಯಲ್ಲಿ ರಾಜ್ಯಕ್ಕೆ 27ನೇ RANK ಬಂದು ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ. ಏಳು ಮಕ್ಕಳ ಪೈಕಿ ಕೊನೆಯವರಾಗಿರುವ ಸಲೀಮಾ ಮುನವಳ್ಳಿ, ಬಿಇ ಯಲ್ಲಿ ಏರೋನಾಟಿಕಲ್ ಇಂಜಿನಿಯರ್ ಪದವಿ ಪಡೆದಿದ್ದಾರೆ.

ಆರ್ ಪಿಎಫ್ ಜಾರ್ಖಂಡ, ಕೆಎಸ್ಐಎಸ್ ಎಫ್ ಪೊಲೀಸ್, ಪೋಸ್ಟಲ್ ಡಿಪಾರ್ಟಮೆಂಟ್, ಕರ್ನಾಟಕ ಸಿವಿಲ್ ಪೊಲೀಸ್ ವಿಜಯಪುರಕ್ಕೆ ಆಯ್ಕೆಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ, ಆರ್ ಪಿಎಫ್ ಜಾರ್ಖಂಡಗೆ ಜ್ವಾಯಿನ್ ಆಗಿ ಇನ್ನೂ ಎರಡು ತಿಂಗಳು ಕಳೆದಿರಲಿಲ್ಲ. ಅಷ್ಟರಲ್ಲಿಯೇ ಮಹತ್ವಾಕಾಂಕ್ಷೆಯ ಪಿಎಸೈ ಆಗಿ ಸಲೀಮಾ ಆಯ್ಕೆಯಾಗಿದ್ದಾರೆ.

ಸಲೀಮಾ ಮುನವಳ್ಳಿಯವರ ಆಯ್ಕೆ ಗ್ರಾಮದ ಪ್ರಮುಖರಲ್ಲಿ ಹೆಮ್ಮೆ ಮೂಡಿಸಿದೆ. ಅದೇ ಕಾರಣಕ್ಕೆ ಸಲೀಮಾ ಮುನವಳ್ಳಿಯವರನ್ನ ಸತ್ಕರಿಸಲಾಗಿದೆ.


Spread the love

Leave a Reply

Your email address will not be published. Required fields are marked *