ಪುಡಕಲಕಟ್ಟಿಯಲ್ಲಿ ಸೀಮಿ ಬಂಡೇಮ್ಮದೇವಿಗೆ ಮಹಾ ರುದ್ರಾಭಿಷೇಕ
ಧಾರವಾಡ: ತಾಲೂಕಿನ ಪುಡಕಲಕಟ್ಟಿ ಗ್ರಾಮದ ಶ್ರೀ ಸೀಮಿ ಬಂಡೇಮ್ಮ ದೇವಿಗೆ ಮಹಾ ರುದ್ರಾಭಿಷೇಕ ಹಾಗೂ ಉಡಿ ತುಂಬುವ ಕಾರ್ಯಕ್ರಮ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಕೊರೋನಾ ಸಮಯದಲ್ಲಿ ನಡೆಯುತ್ತಿರುವ ಮಹಾ ರುದ್ರಾಭಿಷೇಕದಲ್ಲಿ ಭಾಗವಹಿಸಿದ ಗ್ರಾಮಸ್ಥರು, ಕೊರೋನಾ ರೋಗದಿಂದ ಗ್ರಾಮವನ್ನ ಕಾಪಾಡು. ನಮ್ಮೇಲ್ಲರ ಆರೋಗ್ಯವನ್ನೇ ತಾಯಿ ನೀನೇ ಕಾಪಾಡಬೇಕೆಂದು ಶ್ರೀ ಸೀಮಿ ಬಂಡೆಮ್ಮ ದೇವಿಯನ್ನ ಬೇಡಿಕೊಂಡರು.
ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸಿದ ಭಕ್ತಸಮೂಹ, ದೇವಿಯ ಕೃಪೆಗೆ ಪಾತ್ರರಾದರು. ಪೂಜೆಯ ನಂತರ ನಡೆದ ಪ್ರಸಾದ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ದೇವಿಯ ಪ್ರಸಾದ ಸ್ವೀಕರಿಸಿ, ಕೃತಾರ್ಥರಾದರು.
ಚನ್ನಯ್ಯ ಗಂ ಹಿರೇಮಠ, ಪ್ರಭಯ್ಯ ಚಿಕ್ಕಮಠ, ಗುರುಪಾದಯ್ಯ ಗು ಪಂಚಾಂಗಮಠ, ಈರಯ್ಯ ಕ ಇಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.