ನವಲಗುಂದದಲ್ಲಿ ಪಂಚಮಸಾಲಿ ಸಮಾಜದ ಪ್ರತಿಭಟನೆ
1 min readಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ, ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕೆಂದು ಆಗ್ರಹಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಸಮಾಜದ ಪ್ರಮುಖರು, ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕೆಂದು ಆಗ್ರಹಿಸಿದರು. ಸಮಾಜದ ಏಳಿಗೆಗಾಗಿ ಸರಕಾರ ಇದನ್ನ ನೀಡಬೇಕಾದ ಅವಶ್ಯಕತೆಯಿದೆ. ಸಾಮಾಜಿಕವಾಗಿ ಅನುಕೂಲ ಮಾಡಲು ಸರಕಾರ ಮುಂದಾಗಬೇಕೆಂದು ಮನವಿ ಮಾಡಿಕೊಂಡರು.
ಪಟ್ಟಣದಲ್ಲಿ ನಡೆದ ಮೆರವಣಿಗೆಯು ತಹಶೀಲ್ದಾರ ಕಚೇರಿತನಕ ನಡೆಯಿತು. ನಂತರ ತಹಶೀಲ್ದಾರ ನವೀನ ಹುಲ್ಲೂರ ಅವರಿಗೆ ಮನವಿ ನೀಡಿ, ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸರಕಾರಕ್ಕೆ ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಗುರುರಾಯನಗೌಡ ಪಾಟೀಲ , ಮೈಲಾರಪ್ಪ ಕಮತರ, ರಾಜು ಅಕ್ಕಿ, ಲಾಲಬಹುದ್ದೂರ ಶಾಸ್ತ್ರಿ, ಶಂಕರು ತೋಟದ, ಶರಣಪ್ಪ ಅಕ್ಕರಕ, ಸಮಾಜದ ಯುವಕರಾದ ಸಂತೋಷ ನಾವಳ್ಳಿ, ದೇವರಾಜ ಕರಿಯಪ್ಪನವರ, ನಿಂಗನಗೌಡ ಪಾಟೀಲ, ಪ್ರಭು ಇಬ್ರಾಹಿಂಪುರ, ಮಹೇಶ ಬೆಳ್ಳಿ, ಮಂಜುನಾಥ ಹೆಬಸೂರ ಸೇರಿದಂತೆ ಹಲವರು ಭಾಗವಹಿಸಿದ್ದರು.