ಲಿಂಗಾಯತ ಸಮುದಾಯದ ಮೇಲೆ ದಬ್ಬಾಳಿಕೆ: ಮಠಾಧೀಶರಿಗೆ ಮನವಿ
1 min readಧಾರವಾಡ: ಭಾರತದಲ್ಲಿ ನಿರ್ದಿಷ್ಟ ಸಮುದಾಯಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದರಲ್ಲಿ ಲಿಂಗಾಯತ ಸಮುದಾಯಕ್ಕೂ ಇದೇ ಥರವಾಗಿ ಅನ್ಯಾಯ ನಡೆಯುತ್ತಿದೆ ಎಂದು ಲಿಂಗಾಯತ ಸಮುದಾಯ ಮುಖಂಡರು, ಪಂಚಮಸಾಲಿ ಮಠದ ಸ್ವಾಮೀಜಿಯವರಿಗೆ ಮನವಿ ಸಲ್ಲಿಸಿ, ಸಮುದಾಯದ ಉಳಿವಿಗಾಗಿ ಒತ್ತು ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಕುರಿತು ಶ್ರೀಶೈಲಗೌಡ ಕಮತರ ನೇತೃತ್ವದಲ್ಲಿ ಪಂಚಮಸಾಲಿ ಮಠದ ಸ್ವಾಮೀಜಿಗಳನ್ನ ಭೇಟಿ ಮಾಡಿದ ಮುಖಂಡರು, ಲಿಂಗಾಯತ ಸಮುದಾಯ ಕೇವಲ ಕೈಗೊಂಬೆಯಾಗಿ ಬಳಸಲಾಗುತ್ತಿದೆ. ಸಮಾಜವನ್ನ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಮುಗಿಸಲು ಹುನ್ನಾರ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.
ಲಿಂಗಾಯತ ಸಮುದಾಯದ ಉಳಿವಿಗಾಗಿ ಮಠಾಧೀಶರು ಒತ್ತು ಕೊಡಬೇಕು. ಇಲ್ಲದಿದ್ದರೇ ಲಿಂಗಾಯತ ಸಮುದಾಯ ಮರಿಚೀಕೆಯಾಗಿ ಉಳಿಯುತ್ತದೆ. ಲಿಂಗಾಯತ ಸಮುದಾಯವನ್ನ ಲಿಂಗಾಯತ ಸಮುದಾಯದವರನ್ನ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ ಎಂದು ಮುಖಂಡರು ಹೇಳಿಕೊಂಡಿದ್ದಾರೆ.
ಸಮುದಾಯದ ಉಳಿವಿಗಾಗಿ ಮಠಾಧೀಶರು ಮುಂದಾಗಬೇಕು ಎಂದು ಮುಖಂಡರು ಮನವಿ ಮಾಡಿಕೊಂಡಿದ್ದು, ಇದಕ್ಕೆ ಮಠಾಧೀಶರು ಕೂಡ ಒಪ್ಪಿದ್ದಾರೆಂದು ಹೇಳಲಾಗಿದೆ.