Posts Slider

Karnataka Voice

Latest Kannada News

ಹುಬ್ಬಳ್ಳಿ ಬಳಿ ಹೈಡ್ರೋಲಿಕ್ ಜಾಕ್, ಟಿಪ್ಪರ್ ಟೈರ್, ಡಿಸೇಲ್ ಕಳ್ಳತನ: ಕಂಪನಿ ಮಾಲೀಕ ಕಂಗಾಲು..

1 min read
Spread the love

ಹುಬ್ಬಳ್ಳಿ: ತಾಲೂಕಿನ ಪಾಳ ಗ್ರಾಮದ ಹತ್ತಿರ ರಸ್ತೆ ಕಾಮಗಾರಿಯನ್ನು ನಡೆಸುತ್ತಿದ್ದ ,ಪ್ರೀತಿ ಪಾಲ್ ಸಿಂಗ್ ಎಂಬವರಿಗೆ ಸೇರಿದ ANEGA ಕಂಪನಿಯ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು  ಕಾರ್ಮಿಕರೆ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಹುಬ್ಬಳ್ಳಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳೆದ 6 ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕರಾದ ರಂಜಿತಾ ಬಾಯ್, ಮುಖೀಮ್ ಅನ್ಸಾರಿ, ಸುನೀಲ ಕುಮಾರ ಶರ್ಮ, ಸೂರಜ್ ಹಾಗೂ ಅಜಯಕುಮಾರ ರಾಮ್ ಬಾಯ್ ಎಂಬ ಕಾರ್ಮಿಕರೇ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಅಂತಾ ಚನ್ನಪ್ಪ ಕಲ್ಲಪ್ಪ ಸಾಲಗಾರ ಎಂಬುವರು ದೂರನ್ನು ನೀಡಿದ್ದಾರೆ.

ಕಂಪನಿಯ ಹೈಡ್ರೋಲಿಕ್ ಜಾಕ್, 1150ಲೀಟರ್ ಡೀಸೆಲ್, ಟಿಪ್ಪರ್ ಟೈರ್ ಹಾಗೂ 50 ಗ್ರಾಂ ಬಂಗಾರದ ಖಡಗವನ್ನು ಕದ್ದೊಯ್ದ ಪಾರಾರಿಯಾಗಿದ್ದರೆ ಎಂದು ದೂರನ್ನು ದಾಖಲು ಮಾಡಿದ್ದು, ಆರೋಪಿಗಳನ್ನ ಪತ್ತೆ ಹಚ್ಚಿ ಕೊಡುವಂತೆ ಪೊಲೀಸರಿಗೆ ಕೇಳಿಕೊಂಡಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *