ಬೈರಿದೇವರಕೊಪ್ಪ ಬಳಿ ಕ್ಯಾಂಟರ್ ಮುಂದೆ ಬಿದ್ದ ಸ್ಕೂಟಿ: ಗಂಭೀರ ಸ್ಥಿತಿಯಲ್ಲಿ ಮಹಿಳೆ- ಇಬ್ಬರು ಮಕ್ಕಳು ಪಾರು
1 min readಹುಬ್ಬಳ್ಳಿ: ಮಹಿಳೆಯೋರ್ವಳು ಸ್ಕೂಟಿಯಲ್ಲಿ ಎರಡು ಮಕ್ಕಳನ್ನ ಕರೆದುಕೊಂಡು ಬರುತ್ತಿದ್ದ ಸಮಯದಲ್ಲಿ ಕ್ಯಾಂಟರ್ ಮುಂದೆ ಮಹಿಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಬೈರಿದೇವರಕೊಪ್ಪದ ಬಳಿ ಸಂಭವಿಸಿದೆ.
ಅವಘಾತವಾಗಿದ್ದ ಸಂಬಂಧಿಕರನ್ನ ನೋಡಲು ಸ್ಕೂಟಿಯಲ್ಲಿ ಹೊರಟಿದ್ದ ಧಾರವಾಡ ತಾಲೂಕಿನ ಮನಸೂರ ಗ್ರಾಮದ ರೇಖಾ ಕಮ್ಮಾರ ತಲೆಗೆ ತೀವ್ರವಾದ ಗಾಯಗಳಾಗಿದ್ದು, ಜೊತೆಗಿದ್ದ ಎರಡು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣವೇ ಸ್ಥಳೀಯರು ಕಿಮ್ಸಗೆ ರವಾನೆ ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳನ್ನ ತೆಗೆದುಕೊಂಡು ಬರುತ್ತಿದ್ದಾಗ, ಸ್ಕೂಟಿಯ ಎಡಭಾಗದಲ್ಲಿದ್ದ ಮಗುವೊಂದು ಕೈಯನ್ನ ಗಟ್ಟಿಯಾಗಿ ಹಿಡಿದಿದೆ. ಇದರಿಂದ ಆಯತಪ್ಪಿ ಕ್ಯಾಂಟರ್ ಮುಂಭಾಗವೇ ಬಿದ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಟ್ಯಾಂಕರ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡದೊಂದು ದುರಂತ ತಪ್ಪಿದೆ.
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳುಗಳಿಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.