ಈದ್ ಮಿಲಾದ್: ಮಾದರಿಯಾದ ನವಲಗುಂದದ ನೌಜವಾನ ಕಮೀಟಿ
ಧಾರವಾಡ: ಇಸ್ಲಾಂ ಧರ್ಮದ ಮೊಹ್ಮದ ಪೈಗಂಬರ ಅವರ ಜನ್ಮದಿನಾಚರಣೆಯನ್ನ ವಿಶಿಷ್ಟವಾಗಿ ಆಚರಿಸಿ, ಬೇರೆಯವರಿಂದಲೂ ಮೆಚ್ಚುಗೆ ಪಡೆಯುವಂತ ಕಾರ್ಯವನ್ನ ಸದ್ದಿಲ್ಲದೇ ಮಾಡಿ ಮುಗಿಸಿದೆ ನವಲಗುಂದ ಪಟ್ಟಣದ ನೌಜವಾನ ಕಮೀಟಿ.
ಈದ್ ಮಿಲಾದ್ ಹಬ್ಬವನ್ನ ಡಿಜೆಗಳನ್ನ ಹಚ್ಚಿ, ಅಲ್ಲಾಹನ ಸ್ಮರಣೆ ಮಾಡುತ್ತ ಪಟ್ಟಣದ ತುಂಬ ಅಲೆದಾಡುತ್ತಿದ್ದ ಮೆರವಣಿಗೆಯಿಲ್ಲದ ಕಾರಣ, ಹಬ್ಬವನ್ನ ಭಾವೈಕ್ಯತೆಯ ಪರಿಮಳ ಸೂಸುವ ಹಾಗೆ ಮಾಡಲಾಯಿತು.
ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಸ್ಥಳದಲ್ಲಿ ಪ್ರಸಾದ ವಿತರಣೆ ಮಾಡುವ ಮೂಲಕ ಎಲ್ಲರಿಂದಲೂ ಶಹಬ್ಬಾಸ್ ಗಿರಿಗೆ ಒಳಗಾದರು. ಬಹುತೇಕರು ಮೊಹ್ಮದ ಪೈಂಗಬರರ ಆಸರೆ ಸದಾಕಾಲ ಮೇಲಿರಲಿ ಎಂದು ಬೇಡಿಕೊಂಡರು.
ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಸಿಹಿ ವಿತರಿಸಿದರು. ತೌಸೀಫ ಜಮಖಾನ, ಸರ್ಫರಾಜ ಮಕಾನದಾರ, ಬಾಬಾಜಾನ ಕೆರೂರ, ಮಹ್ಮದಲಿ ಮಕಾನದಾರ, ಸುಲೇಮಾನ ನಾಶಿಪುಡಿ, ಇಸ್ಮಾಯಿಲ ಮನಬಾವ, ಹಬೀಬ ಜಮಖಾನ, ಬುಡಾ ಕೆರೂರ, ಮುಸ್ತಾಕ ಮುಲ್ಲಾ, ಶಾನು ಮೊರಬದ, ರಿಯಾಜ ಭಾಗವಾನ, ಆಸೀಫ ಮಕಾನದಾರ, ದಾದು ಜಮಖಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.