ಭಂಡ ಅವಳ ಗಂಡ: ರಸ್ತೆಯಲ್ಲೇ ರಣಚಂಡಿಯಾಟ- ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನ
1 min readಹುಬ್ಬಳ್ಳಿ: ದೇಶಪಾಂಡೆನಗರದಲ್ಲಿ ಭಗ್ನ ಪ್ರೇಮಿಯೊಬ್ಬ ಯುವತಿಗೆ ತಲ್ವಾರ ಹಾಕಿದ ಪ್ರಕರಣ ನಡೆದ ಬೆನ್ನಲ್ಲೇ ಕುಡುಕ ಗಂಡನ ವಿರುದ್ಧ ಮಹಿಳೆಯೋರ್ವಳು ರಣಚಂಡಿಯಾದ ಪ್ರಕರಣ ಹುಬ್ಬಳ್ಳಿ-ಸುಳ್ಳ ರಸ್ತೆಯಲ್ಲಿ ನಡೆದಿದೆ.
ಹಲವು ದಿನಗಳಿಂದ ನಿರಂತರವಾಗಿ ತೊಂದರೆ ಅನುಭವಿಸುತ್ತಿರುವ ಮಹಿಳೆ, ಕಲ್ಲಿನಿಂದ ಹೊಡೆದು ತೀವ್ರ ಗಾಯಗೊಳಿಸಿದ್ದು, ಕುಡುಕ ಪತಿರಾಯ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದ. ಘಟನೆಯನ್ನ ನೋಡಿದ ಸ್ಥಳೀಯರು, ಆಕೆಯನ್ನು ಬಿಡಿಸಲು ಹೋದಾಗ, ‘ಬಿಡ್ರೀ ಅವನ್ ಕೊಲೆ ಮಾಡ್ತೇನಿ. ಭಾಳ್ ತ್ರಾಸ್ ಕೊಡ್ತಾನ್’ ಎನ್ನುತ್ತಲೇ ಗಂಡನ ಮೇಲೆ ಆಕ್ರೋಶವ್ಯಕ್ತಪಡಿಸುತ್ತಿದ್ದಳು.
ಪತ್ನಿಯ ಕಲ್ಲಿನೇಟಿನಿಂದ ರಕ್ತಸಿಕ್ತವಾಗಿದ್ದ ಪತಿರಾಯ, ಅಂಬ್ಯುಲೆನ್ಸ್ ಕರೆಸಿ ಎಂದು ಗೋಗೆರೆಯುತ್ತಿದ್ದ.
ಹುಬ್ಬಳ್ಳಿಯಿಂದ ಸುಳ್ಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಪಾದಗಟ್ಟಿಯ ಬಳಿ ಘಟನೆ ನಡೆದಿದೆ.
ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪತಿ ಮಹಾಶಯನನ್ನ ಕಿಮ್ಸಗೆ ರವಾನೆ ಮಾಡಿದ್ದಾರೆ.