ಹುಬ್ಬಳ್ಳಿಯಲ್ಲಿ ಐಬಿಯಲ್ಲಿ ಏನೂ ನಡೆಯುತ್ತಿದೆ.. ಹುಷಾರು…!
1 min readಹುಬ್ಬಳ್ಳಿ: ನಗರದ ದೇಶಪಾಂಡೆನಗರದ ಬಳಿಯಿರುವ ಸರಕಾರಿ ಅತಿಥಿ ಗೃಹ ಯಾನೇ ಸರ್ಕೀಟ್ ಹೌಸನಲ್ಲಿ ದಿನವೂ ಒಂದಿಲ್ಲಾ ಒಂದು ರಗಳೆಗಳು ಆರಂಭಗೊಂಡಿದ್ದು, ಬಂದವರೆಲ್ಲರೂ ರೂಮ್ ಕೇಳುತ್ತಾ ಸಿಬ್ಬಂದಿಗಳನ್ನ ಹೈರಾಣ ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇಂದು ಕೂಡಾ ರೈತ ಸಂಘದ ಹೆಸರಿನಲ್ಲಿ ಬಂದ ಕೆಲವರು ರೂಮ್ ಕೇಳಿದ್ದಾರೆ. ಸಿಬ್ಬಂದಿಗಳು ನಿಮ್ಮ ಕಾರ್ಡಗಳನ್ನ ತೋರಿಸಿ ರೂಮ್ ಕೊಡುತ್ತೇವೆ ಎಂದು ಕೇಳಿದರೇ, ಅವರೊಂದಿಗೆ ರೈತ ಸಂಘದವರು ಎಂದು ಹೇಳಿಕೊಳ್ಳುವವರು ಕಾದಾಟಕ್ಕೆ ಇಳಿಯುವ ಯತ್ನ ಮಾಡಿದ್ರು.
ಈ ಘಟನೆಯಿಂದ ಕೆಲಕಾಲ ಸರ್ಕೀಟ್ ಹೌಸನಲ್ಲಿ ಗೊಂದಲದ ವಾತವಾರಣ ಸೃಷ್ಟಿಯಾಗಿತ್ತು. ಕೆಲವರು ರೂಮ್ ಗಾಗಿ ಬೇಡಿಕೆಯಿಡುವುದು ಸಹಜ. ಆದರೆ, ಹೇಳಿದ ಸಂಘಟನೆಯ ಕಾರ್ಡಗಳನ್ನಾದರೂ ಇಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವನ್ನ ಬಂದವರು ಹೊಂದಬೇಕು ಎನ್ನುವುದು ಕೂಡಾ ಅಷ್ಟೇ ಮುಖ್ಯವಾಗಿದೆ.
ಇಂದಿನ ಘಟನೆಯಿಂದ ಮತ್ತಷ್ಟು ರೋಸಿ ಹೋಗಿರುವ ಸಿಬ್ಬಂದಿಗಳು, ಯಾವುದೇ ಕಾರಣಕ್ಕೂ ಆಧಾರವಿಲ್ಲದ ಜನರಿಗೆ ರೂಮ್ ಕೊಡುವುದೇ ಇಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೇ ಸಿಬ್ಬಂದಿಗಳಿಗೆ 24 ಗಂಟೆಯೂ ಕಿರಿಕಿರಿ ತಪ್ಪಿದ್ದಲ್ಲ.