ರಮೇಶ ಭಾಂಡಗೆ ಕೊಲೆಯಾದಾಗ ಸಿಹಿ ಹಂಚಿದ್ರಾ ಅಧಿಕಾರಿಗಳು: ತನಿಖೆಗೆ ಒತ್ತಾಯಿಸುತ್ತಿರೋರು ಯಾರೂ..!

ಹುಬ್ಬಳ್ಳಿ: ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಆರ್ ಟಿಐ ಕಾರ್ಯಕರ್ತರ ರಮೇಶ ಭಾಂಡಗೆ ಹತ್ಯೆಯಾದ ದಿನ ಅಧಿಕಾರಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಎಸ್ ಎಸ್ ಕೆ ಸಮಾಜದ ಚಿಂತನ ಮಂಥನ ಸಮಿತಿಯ ಅಧ್ಯಕ್ಷ ಹನಮಂತಸಾ ನಿರಂಜನ ಆಗ್ರಹಿಸಿದ್ದಾರೆ.
ರಮೇಶ ಭಾಂಡಗೇ ನೂರಾರೂ ಕೋಟಿ ರೂಪಾಯಿ ಹೊಂದಿದವರು. ಕೇವಲ ಏಳೆಂಟು ಲಕ್ಷ ಕೊಡದೇ ಸತಾಯಿಸಿದ್ದಾರೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅಂತಹದ್ದು ಏನೂ ಇಲ್ಲ. ಈ ಹತ್ಯೆಯ ಹಿಂದೆ ಬೇರೆಯದ್ದೇ ಉದ್ದೇಶವಿದೆ. ಹಾಗಾಗಿ ಇದರ ಸಮಗ್ರ ತನಿಖೆಯನ್ನ ಮಾಡಿಸಬೇಕೆಂದು ಆಗ್ರಹಿಸಿದರು.
ರಮೇಶ ಭಾಂಡಗೆ, ಹಲವು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಗುಡಿ-ಗುಂಡಾರಗಳಿಗೆ ಹಣಕಾಸಿನ ನೆರವು ನೀಡಿದ್ದಾರೆ. ಅಂತಹದರಲ್ಲಿ ಶರಣಾದವರನ್ನೇ ಕೊಲೆಗಾರರು ಎಂದು ತೋರಿಸಿ, ಪ್ರಮುಖವಾಗಿರುವ ವಿಷಯವನ್ನ ಮುಚ್ಚಿಡಲಾಗುತ್ತಿದೆ ಎಂದು ನಿರಂಜನ ಸಂಶಯವ್ಯಕ್ತಪಡಿಸಿದ್ದಾರೆ.
ಹತ್ಯೆಯಾದ ದಿನ ಅಧಿಕಾರಿಗಳು ಸಿಹಿ ಹಂಚಿದ್ದಾರೆ. ಅವರ ಮನೆಯಲ್ಲೂ ಸತ್ತಾಗ ಸಿಹಿ ತಿನ್ನುವ ಹಾಗಾಗಲಿ ಎಂದು ಆಕ್ರೋಶದಿಂದ ನುಡಿದ ನಿರಂಜನ, ಈ ಹತ್ಯೆಯ ಹಿಂದೆ ಬೇರೆಯದ್ದೇ ಉದ್ದೇಶವಿದೆ. ಹಾಗಾಗಿ, ಈ ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಹನಮಂತಸಾ ನಿರಂಜನ ಒತ್ತಾಯಿಸಿದ್ದಾರೆ.