ನಟ ದರ್ಶನ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…!!!
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರನಟ ದರ್ಶನ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದ್ದು, ನಾಳೆನೇ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.
ಹೈಕೋರ್ಟ್‌ನಲ್ಲಿ ದರ್ಶನ ಅವರಿಗೆ ಜಾಮೀನು ನೀಡುವಂತೆ ಆಪಾದಿತರ ಪರ ವಕೀಲರಾದ ಸಿ.ವಿ.ನಾಗೇಶ ವಾದ ಮಂಡಿಸಿದರು.
ನಾಳೆಗೆ ಮುಂದೂಡಲಾಗಿದ್ದು, ಜಾಮೀನು ಸಿಕ್ಕರೇ ದರ್ಶನಗೆ ದೀಪಾವಳಿ ಸಂತಸ ಸಿಗಲಿದೆ. ದರ್ಶನ ಅವರ ಬೆನ್ನು ನೋವಿನ ಬಗ್ಗೆಯೂ ಜಾಮೀನಿನಲ್ಲಿ ಉಲ್ಲೇಖ ಮಾಡಲಾಗಿದೆ.