ಧಾರವಾಡ ಜಿಲ್ಲೆಯಲ್ಲಿ “ಮಹಿಳೆಯರ ಮನೆ ಹಿಂಡುತ್ತಿರುವ” ಸಂಘಗಳ ಬಡ್ಡಿ…!!!!
1 min readಧಾರವಾಡ: ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಗ್ರಾಮೀಣ ಮತ್ತು ಶಹರದ ಮೂಲೆ ಮೂಲೆಯಲ್ಲಿ ಬಡ್ಡಿ ಹಣ ಪೀಕುತ್ತಿರುವ ಬಗ್ಗೆ ಧಾರವಾಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಬಡ ಕುಟುಂಬಗಳು ಬೀದಿಗೆ ಬೀಳುತ್ತಿರುವುದನ್ನ ತಪ್ಪಿಸಬೇಕಿದೆ.
ಕರ್ನಾಟಕವಾಯ್ಸ್.ಕಾಂಗೆ ಲಭಿಸಿರುವ ಮಾಹಿತಿಯ ಪ್ರಕಾರ, ವಾರದ ರೂಪದಲ್ಲಿ ಹಣವನ್ನ ಬಡ್ಡಿ ಸಮೇತ ಪಡೆದುಕೊಳ್ಳಲಾಗುತ್ತಿದೆ. ಹಣವನ್ನ ವಸೂಲಿ ಮಾಡಲು “ದಷ್ಟ-ಪುಷ್ಟ” ರನ್ನ ಬಿಟ್ಟು ವಸೂಲಿ ಮಾಡಲಾಗುತ್ತಿದೆ.
“ಗ್ರಾಮೀಣ” ಹೆಸರಿನಲ್ಲಿ ಮಹಿಳೆಯರಿಗೆ ಹತ್ತು ಸಾವಿರದಿಂದ ಹಿಡಿದು ಲಕ್ಷ ಲಕ್ಷ ರೂಪಾಯಿ ಸಾಲ ಕೊಡಲಾಗತ್ತೆ. ಆ ಹಣವನ್ನ ಎರಡು ವರ್ಷದವರೆಗೆ ‘ವಾರಾ ವಾರಾ’ ಪಡೆಯಲಾಗತ್ತೆ. ಸಾಲ ಪಡೆದವರು ವಾರಕ್ಕೊಮ್ಮೆ ಕೊಡುವುದು ಸಲೀಸು ಅಂದುಕೊಂಡು ಹಣ ಪಡೆಯುತ್ತಾರೆ. ಆದರೆ, ಅವರು ಪಡೆದ ಹಣಕ್ಕೆ ಬರೋಬ್ಬರಿ ಹದಿನಾರರಿಂದ ಹದಿನೆಂಟು ಪರ್ಸೆಂಟ್ ಬಡ್ಡಿಯನ್ನ ಪಡೆಯಲಾಗತ್ತೆ.
ಇಂತಹ ಬಡ್ಡಿ ದಂಧೆಗೆ ಮಹಿಳೆಯರನ್ನ ಬೆದರಿಸಲು ಹುಬ್ಬಳ್ಳಿ, ಬೈಲಹೊಂಗಲ ಸೇರಿದಂತೆ ಹಲವು ಭಾಗದಿಂದ ಕೆಲವರನ್ನ ಅನಾಗಕರಿಕರಂತೆ ವರ್ತಿಸಲು ತಂದಿಟ್ಟಿದ್ದಾರೆ. ಹಣ ಪಡೆದವರು ಒಂದು ವಾರ ಕೊಡದೇ ಇದ್ದರೇ, ಅವರ ಮನೆ ಬಾಗಿಲಿನಲ್ಲಿ ನಿಂತು “ಆವಾಜ್” ಹಾಕಲು ಆರಂಭಿಸುತ್ತಾರೆ. ಮರ್ಯದೆಗೆ ಅಂಜಿ ಅಕ್ಕಪಕ್ಕದವರ ಮನೆಯಲ್ಲಿ ಹಣ ಪಡೆದು ವಾರದ ಹಣ ಕೊಡುತ್ತಿದ್ದಾರೆ.
ಅಸಲಿಗೆ ಇಂತಹ ಬಡ್ಡಿ ದಂಧೆ ನಡೆಸಲು ಇವರಿಗೆ ಪರವಾನಿಗೆ ಕೊಟ್ಟಿದೇಯಾ ಜಿಲ್ಲಾಡಳಿತ. ನೀತಿ, ನಿಯಮಗಳೇನು. ಯಾರಿಗೂ ಗೊತ್ತಿಲ್ಲದಂತೆ ದಂಧೆ ನಿರಾಳವಾಗಿ ನಡೆಯುತ್ತಿದೆ. ಪೊಲೀಸ್ ಇಲಾಖೆಗೂ ಈ ವಿಷಯ ಗೊತ್ತಾ.. ಗೊತ್ತಿಲ್ಲದಿದ್ದರೇ ಹಳ್ಳಿಗಳ ನೆಮ್ಮದಿ ಹಾಳು ಮಾಡುತ್ತಿರುವ “ಬಡ್ಡಿ ದಂಧೆ”ಯನ್ನ ನಿಲ್ಲಿಸಿ, ಜೀವ ಉಳಿಸಿ.