ಎಲ್ಲರಂತಲ್ಲ ಈ ಹುಡುಗ: ಮಂಗಳಮುಖಿಯರೊಂದಿಗೆ ಹುಬ್ಬಳ್ಳಿ ಕುಟುಂಬ ಏನು ಮಾಡಿದೆ ಗೊತ್ತಾ..!
1 min readಹುಬ್ಬಳ್ಳಿ: ದೀಪಾವಳಿಯ ಹಬ್ಬದ ಹಾರ್ಧಿಕ ಶುಭಾಶಯಗಳನ್ನ ತಮಗೆಲ್ಲರಿಗೂ ತಿಳಿಸುತ್ತ, ನಿಮಗೊಂದು ಮಾನವೀಯತೆ ನೆಲೆಯ ಮಾಹಿತಿಯನ್ನ ತಿಳಿಸುತ್ತಿದ್ದೇವೆ. ಎಲ್ಲರೂ ಅವರನ್ನ ಕಂಡರೇ ಮೂಗು ಮುರಿಯುವವರೇ ಹೆಚ್ಚಾಗಿರುವಾಗ, ಇಲ್ಲೋಬ್ಬ ಯುವಕ ತನ್ನ ತಂಡದೊಂದಿಗೆ, ಬಹುತೇಕರಿಂದ ತಿರಸ್ಕಾರಕ್ಕೆ ಒಳಗಾಗುವ ಜನರೊಂದಿಗೆ ದೀಪಾವಳಿ ಆಚರಣೆ ಮಾಡಿ, ಮಾದರಿಯಾಗಿದ್ದಾನೆ.
ವಿಶೇಷ ಕಾರ್ಯಕ್ರಮದ ವೀಡಿಯೋ ಇಲ್ಲಿದೆ ನೋಡಿ..
ದೀಪಾವಳಿ ಅಂದ್ರೆ ಸಾಕು ಅದು ಎಲ್ಲರ ಮನೆಯಲ್ಲಿ ದೀಪವನ್ನು ಬೆಳಗಿಸಿ ಅವರ ಮುಖದಲ್ಲಿ ಮಂದಹಾಸವನ್ನು ಮೂಡಿಸಬೇಕಾದ ಹಬ್ಬ, ಆದ್ರೆ ನಮ್ಮ ಸಮಾಜದಲ್ಲಿ ಕೀಳು ಮಟ್ಟದಲ್ಲಿ ಕಾಣುವಂತಹ ಜನರನ್ನ ಮನೆಗೆ ಕರೆದುಕೊಂಡು ಬಂದು ದೀಪಾವಳಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಅವರೂ ಕೂಡಾ ನಮ್ಮ ಸಹೋದರ-ಸಹೋದರಿಯರಿದ್ದ ಹಾಗೇ ಅನ್ನೋ ಮನೋಭಾವನೆಯಿಂದ ನಡೆದ ಕಾರ್ಯಕ್ರಮವಿದು.
ಖುಷಿ ಖುಷಿಯಾಗಿ ದೇವರ ಪೂಜೆಯನ್ನು ಮಾಡುತ್ತಾ ಸಂತಸದಿಂದ ಹಬ್ಬ ಆಚರಣೆ ಮಾಡುತ್ತಿರುವ ಇವರೆಲ್ಲ ಧಾರವಾಡದ ಮಂಗಳಮುಖಿಯರು, ಇಂದು ಹುಬ್ಬಳ್ಳಿಯ ಸಮಾಜ ಸೇವಕ ಮಂಜುನಾಥ ಹೆಬಸುರ ಮನೆಯಲ್ಲಿ ಭಾಗಿಯಾಗಿ ಅವರ ಕುಟುಂಬಸ್ಥರ ಹಾಗೆ ಎಲ್ಲರೂ ಸೇರಿ ತಾವೇ ಲಕ್ಷೀ ಪೂಜೆ ಮಾಡಿ ಖುಷಿಯಾಗಿ ದೀಪಾವಳಿ ಆಚರಣೆ ಮಾಡಿದ್ದಾರೆ, ನಮ್ಮನ್ನು ತಮ್ಮ ಅಕ್ಕ ತಂಗಿಯರ ರೀತಿಯಲ್ಲಿ ನಮ್ಮನ್ನು ಇವರು ನೋಡಿಕೊಂಡಿದ್ದಾರೆ ಅಂತಾರೆ ಮಂಗಳಮುಖಿಯರು..
ಸಮಾಜದಿಂದ ಹಾಗೂ ಕುಟುಂಬದಿಂದ ದೂರ ಇದ್ದು ಜೊತೆಗೆ ಕುಟುಂಬಸ್ಥರ ಜೊತೆ ಹಬ್ಬವನ್ನು ಆಚರಣೆ ಮಾಡಬೇಕು ಅಂತಾ ಎಲ್ಲರಿಗೂ ಆಸೆ ಇರತ್ತೆ. ಹೀಗಾಗಿ ಇವರು ಈ ರೀತಿಯಾಗಿ ಕುಟುಂಬಸ್ಥರೊಡನೆ ಹಬ್ಬ ಆಚರಣೆ ಮಾಡೋದು ತುಂಬಾ ವಿರಳ. ನಾವು ಇಂದು ನಮ್ಮ ಕುಟುಂಬದೊಂದಿಗೆ ಈ ಮಂಗಳಮುಖಿ ಯರನ್ನು ಕರೆಯಿಸಿ ದೀಪಾವಳಿ ಹಬ್ಬವನ್ನು ಆಚರಣೆ ಮಾಡಿದಿವಿ ಅಂತಾರೆ ಮಂಜುನಾಥ ಹೆಬಸೂರ.
ಒಟ್ಟಿನಲ್ಲಿ ಸಮಾಜ ಹಾಗೂ ಕುಟುಂಬದಿಂದ ವಂಚಿತರಾಗಿ ಹಬ್ಬ ಹರಿದಿನಗಳಿಂದ ಆಚರಣೆ ಮಾಡದೆ ಕೊರಗುತ್ತಿರುವ ಇಂತಹ ಮಂಗಳ ಮುಖಿಯರಿಗೆ ಮನೆಗೆ ಕರೆಯಿಸಿ ಕುಟುಂಬಸ್ಥರ ರೀತಿಯಲ್ಲಿ ಅವರನ್ನು ನೋಡಿಕೊಂಡ ಮಂಜುನಾಥ ಗೆಳೆಯರ ಬಳಗದ ಕಾರ್ಯ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿದೆ.