ಬೆಳೆವಿಮೆ “ಪರಿಹಾರ 50-50”- ಹುಬ್ಬಳ್ಳಿ ತಾಲೂಕಿನ ‘ಡಾಕ್ಟರ್-ಈRya’ ಜುಗಲಬಂಧಿ….!!!
ಧಾರವಾಡ: ಅಖಂಡ ಧಾರವಾಡ ಜಿಲ್ಲೆಯಲ್ಲಿ ನಡೆದಿರುವ ಬೆಳೆವಿಮೆ ಪರಿಹಾರ ಫಿಪ್ಟಿ-ಫಿಪ್ಟಿ ಪ್ರಕರಣದಲ್ಲಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನಲ್ಲಿ ಡಾಕ್ಟರ್ ಮತ್ತು ಈರ‌್ಯಾನ ಜುಗಲಬಂಧಿ ತೀವ್ರ ಚರ್ಚೆಗೆ ಗ್ರಾಸವಾಗತೊಡಗಿದೆ.
ಜಿಲ್ಲೆಯ ಪ್ರಮುಖ ರಾಜಕಾರಣಿಯೋರ್ವರ ಬಳಿ ಈ ಫಿಪ್ಟಿ-ಫಿಪ್ಟಿ ಪ್ರಕರಣದ ಬಗ್ಗೆ ದೂರು ನೀಡಿ ಬಂದಿದ್ದ ನಿಷ್ಠಾವಂತ ರೈತರನ್ನ ದಾರಿ ತಪ್ಪಿಸಿದ್ದೆ ಈರ‌್ಯಾ ಎಂಬುದೀಗ ಬಹಿರಂಗವಾಗಿದೆ. ‘ಏ.. ನೀವ್ ಹಾಕಿದ್ದ್ ರೊಕ್ಕ ಬರುದಿಲ್ಲ. ಹಿಂಗ್ ಮಾಡಿದ್ರ್ ರೊಕ್ಕ್ ಬರತೈತಿ’ ಎಂದು ಕಥೆ ಹೇಳುತ್ತಲೇ ಬಡ ರೈತರಿಗೆ ಪಂಗನಾಮ ಹಾಕಲು ನಾಂದಿ ಹಾಡಿದ್ದಾರೆ.
ಗದಗನ ಅಕ್ಕಿ ಕಳ್ಳನ ಜೊತೆಗೂಡಿದ್ದ ಡಾಕ್ಟರ್‌ನೋರ್ವ ಈರ‌್ಯಾನ ಜೊತೆಗೂಡಿ ಕೆಲ ಶ್ರೀಮಂತ ರೈತರ ಮಾಹಿತಿಯನ್ನ ಕೊಟ್ಟು ಫಿಪ್ಟಿ-ಫಿಪ್ಟಿ ದಂಧೆಗೆ ಇಳಿದು, ಕೋಟಿ ಕೋಟಿ ಎಣಿಸುವ ಇರಾದೆಯಲ್ಲಿದ್ದಾರೆ.
2024ರ ಮುಂಗಾರು ಬೆಳೆಯ ಹೆಸರು ಸೇರಿದಂತೆ ಬೇರೆ ಬೆಳೆಯನ್ನ ವಿಮೆಯ ವ್ಯಾಪ್ತಿಗೆ ಸೇರಿಸಲು “ವಿಗ್” ಮಹಾಶಯ ಕೈ ಜೋಡಿಸಿರುವ ಪೋಟೋಗಳು ಅಪ್ಲೋಡ್ ಆಗಿರುವುದು ರಹಸ್ಯವಾಗಿ ಉಳಿದಿಲ್ಲ.
ಇಂತಹ ದೂರ್ತರ ವಾಮಮಾರ್ಗದ ಒಂದೊಂದೆ ಮಾಹಿತಿಗಳು ಹೊರಬರತೊಡಗಿವೆ. ಇಂಥವರಿಂದ ನೂರಾರು ಬಡ ರೈತರಿಗೆ ಅನ್ಯಾಯವಾಗುತ್ತಲೇ ಇದೆ. ಈರ‌್ಯಾನಂತೆ ಹಸಿರು ಟವೆಲ್ ಹಾಕಿಕೊಂಡು ಹುಟ್ಟು ಹೋರಾಟಗಾರನಂತೆ ಫೋಸು ಕೊಟ್ಟು ಅದೇ ರೈತರಿಗೆ ಅನ್ಯಾಯ ಮಾಡುತ್ತಿರುವುದನ್ನ ಭೂತಾಯಿ ಮರೆಯೋದಿಲ್ಲ.