ಅಪರ್ ಆಯುಕ್ತರ ಅವೈಜ್ಞಾನಿಕ ಆದೇಶ ತಿದ್ದುಪಡಿ- ಪರೀಕ್ಷೆ ಒಂದು ದಿನಕ್ಕೆ ಒಂದೇ ವಿಷಯ….!!!

ಧಾರವಾಡ: ಹತ್ತನೇ ವರ್ಗದ ಪೂರ್ವಭಾವಿ ಪರೀಕ್ಷೆ ನಡೆಸಲು ಆದೇಶ ಹೊರಡಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಆದೇಶದ ವಿರುದ್ಧ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ, ಹೊಸ ಆದೇಶವನ್ನ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆಯನ್ನ ನಡೆಸಲು ಮುಂದಾಗಿದ್ದ ಸಮಯದಲ್ಲಿ, ಒಂದು ದಿನಕ್ಕೆ ಎರಡು ವಿಷಯದ ಬಗ್ಗೆ ಪರೀಕ್ಷೆ ನಡೆಸುವಂತೆ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ ಅವರು ಆದೇಶ ಹೊರಡಿಸಿದ್ದರು. ಇದನ್ನ ವಿರೋಧಿಸಿ ರಾಜ್ಯ ಮಾಧ್ಯಮಿಕ ಸಂಘ ಮನವಿ ನೀಡಿತ್ತು.
ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಅವರ ನೇತೃತ್ವದಲ್ಲಿ ನೀಡಿದ ಮನವಿ ಪರಿಣಾಮಕಾರಿಯಾದ ಹಿನ್ನೆಲೆಯಲ್ಲಿ ಅಪರ ಆಯುಕ್ತರು, ಸಂಘದ ಮನವಿಯಂತೆ ಆದೇಶ ಹೊರಡಿಸಿದ್ದಾರೆ.