Posts Slider

Karnataka Voice

Latest Kannada News

ಕುಟುಂಬವನ್ನೇ ಮುಗಿಸಲು ಬಂದವರು ಅಂದರ್: ಹುಬ್ಬಳ್ಳಿಯಲ್ಲಿ ನಡೆದ ಹೇಯ ಕೃತ್ಯ..!

1 min read
Spread the love

ಹುಬ್ಬಳ್ಳಿ: ನೂತನವಾಗಿ ಮನೆ ಕಟ್ಟಲು ಅಡ್ವಾನ್ಸ್ ಪಡೆದು ಮನೆಯನ್ನ ಕಟ್ಟದೇ ಸತಾಯಿಸುತ್ತಿದ್ದ ಮೇಸ್ತ್ರೀಯನ್ನ ಹಣ ಮರಳಿ ಕೇಳಿದ್ದಕ್ಕೆ ಗುಂಪು ಕಟ್ಟಿಕೊಂಡು ಬಂದು ಇಡೀ ಕುಟುಂಬವನ್ನೇ ಹೊಡೆದು, ಗಾಯಗೊಳಿಸಿರುವ ಘಟನೆ ಹಳೇ ಮಂಟೂರ ರಸ್ತೆಯ ಗುಡಗೇರಿ ಹಾಲ್ ಹತ್ತಿರ ಸಂಭವಿಸಿದೆ.

ಖಮರ್ ಟ್ರೇಡರ್ಸ್ ಮಾಲೀಕ ಖಮರಅಲಿ ಮುದ್ದುನವರ ಎಂಬುವವರ ಕುಟುಂಬದ ಹಲವರನ್ನ ಮೇಸ್ತ್ರೀಯಾದ ಶಿರಾಜ್ ಬಡಗಿ ಅಲಿಯಾಸ್ ಪಟೇಲ್ ಹಾಗೂ ಸಹೋದರ ಮೈನುಸಾಬ ಮತ್ತು ಸಿರಾಜನ ಚಿಕ್ಕಮ್ಮ ಪಾತೀಮಾ ಪಟೇಲ್ ಸೇರಿದಂತೆ ಏಳೆಂಟು ಜನರು ಬಂದು ರಾಡನಿಂದ ಹೊಡೆದಿದ್ದಾರೆ. ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದಾರೆಂದು, ಮನೆ ಮಾಲೀಕ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು.

ತೀವ್ರವಾಗಿ ಗಾಯಗೊಂಡವರನ್ನ ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲಸ ಮಾಡದೇ ಇದ್ದರೇ ಹಣ ಮರಳಿ ಕೊಡಿ ಎಂದು ಕೇಳಿದ್ದೇ ಇದಕ್ಕೇಲ್ಲ ಕಾರಣವಾಗಿದೆ ಎಂದು ಮಾಲೀಕ ಹೇಳಿದ್ದಾನೆ. ತನ್ನ ಮನೆಯನ್ನ ಕಟ್ಟಲು ಇಂತಹ ಪರಿಸ್ಥಿತಿ ಬಂದಿರುವುದನ್ನ ನೋಡಿ ಮಾಲೀಕ ಕಂಗಾಲಾಗಿದ್ದಾನೆ.

ದೂರು ದಾಖಲಿಸಿಕೊಂಡಿರುವ ಬೆಂಡಿಗೇರಿ ಠಾಣೆ ಪೊಲೀಸರು ಶಿರಾಜ ಬಡಗಿ ಮತ್ತು ಆತನ ಸಹೋದರ ಖ್ವಾಜಾಮೈನುದ್ಧೀನ ಭಾಷಾಸಾಬ ಪಟೇಲ್ ಎಂಬಾತನನ್ನ ಬಂಧಿಸಿ, ಅವರ ಮೇಲೆ ಕೊಲೆಯತ್ನ, ಹಲ್ಲೆಯಂತಹ ಪ್ರಕರಣಗಳನ್ನ ದಾಖಲು ಮಾಡಿ ಬಂಧನ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *