ಅಂದರ್-ಬಾಹರ್ ರೇಡ್ ಬಗ್ಗೆ ಡಿಸಿಪಿ ಕೊನೆ ದಿನ ಹೇಳಿದ್ದೇನು..
1 min readಹುಬ್ಬಳ್ಳಿ: ಧಾರವಾಡದ ರಮ್ಯ ರೆಸಿಡೆನ್ಸಿ ಬಳಿ ನಡೆದ ಅಂದರ್-ಬಾಹರ್ ಪ್ರಕರಣ ಜಿಲ್ಲೆಯಲ್ಲಿ ನಿರಂತರವಾಗಿ ಶಬ್ದ ಮಾಡುತ್ತಿರುವಾಗಲೇ, ಅವಳಿನಗರದಲ್ಲಿ ನಡೆದ ರೇಡುಗಳ ಬಗ್ಗೆ ಸ್ವತಃ ಡಿಸಿಪಿ ಪಿ.ಕೃಷ್ಣಕಾಂತ ಮಾತನಾಡಿದ್ರು.
ಅವತ್ತು ಅಷ್ಟೇ ಅಲ್ಲ, ದೀಪಾವಳಿ ಸಮಯದಲ್ಲಿ 45 ಪ್ರದೇಶಗಳಲ್ಲಿ ಜೂಜಾಟವಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದರಲ್ಲಿ ನೂರಾರು ಜನರನ್ನ ಬಂಧನ ಮಾಡಿ, ಕಾನೂನು ಪ್ರಕಾರ ಕ್ರಮವನ್ನ ತೆಗೆದುಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಪಿ.ಕೃಷ್ಣಕಾಂತ ಅವರಿಗೆ ಡಿಸಿಪಿ ಹುದ್ದೆಯನ್ನ ಪ್ರಭಾರಿಯಾಗಿ ನೀಡಲಾಗಿತ್ತು. ಇಂದು ಅದು ಕೊನೆ ದಿನವಾಗಿದ್ದು, ಅವರಿನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಧಾರವಾಡ ಹೊರವಲಯದಲ್ಲಿ ನಡೆದಿರುವ ರೇಡ್ ಬಗ್ಗೆ ಹಲವು ಊಹಾಪೋಹಗಳು, ಹೇಳಿಕೆಗಳು ಕೇಳಿ ಬರುತ್ತಿರುವ ಮಧ್ಯೆ ಡಿಸಿಪಿಯಾಗಿದ್ದ ಕೃಷ್ಣಕಾಂತ ಅವರು, ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ. ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಚಟುವಟಿಕೆಯನ್ನ ಬಂದ್ ಮಾಡುವಲ್ಲಿ ನಿರತವಾಗಿರುವುದನ್ನ ಸ್ಪಷ್ಟಪಡಿಸಿದ್ರು.