ಧಾರವಾಡ: ಹತ್ರಾಸ್ ಸಂತ್ರಸ್ಥೆಗೆ ನ್ಯಾಯಕ್ಕಾಗಿ AIMSS ಪ್ರತಿಭಟನೆ
1 min readಧಾರವಾಡ: ಹತ್ರಾಸ್ ಸಂತ್ರಸ್ಥೆಗಾದ ಅನ್ಯಾಯದ ವಿರುದ್ಧ ಹಾಗೂ ಮಹಿಳೆ, ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನ ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಧಾರವಾಡದಲ್ಲಿಂದು ಪ್ರತಿಭಟನೆ ನಡೆಸಿತು.ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾ ನಿರತರು, ಅನ್ಯಾಯ ಮಾಡಿದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ ಮಾತನಾಡಿ, ಉತ್ತರಪ್ರದೇಶ ಸರಕಾರ ಅನ್ಯಾಯವಾದ ಕುಟುಂಬದ ಪರವಾಗಿ ನಿಲ್ಲುವ ಬದಲಾಗಿ, ಅತ್ಯಾಚಾರ ಮಾಡಿದವರ ಪರವಾಗಿ ಕೆಲಸ ಮಾಡುತ್ತಿದೆ. ಸರಕಾರದ ಕ್ರಮವನ್ನ ನ್ಯಾಯಾಂಗ ವ್ಯವಸ್ಥೆಯೂ ಖಂಡಿಸಿದ್ದು, ಸರಕಾರ ಈಗಲಾದರೂ ಎಚ್ಚೆತ್ತುಗೊಳ್ಳಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಗಂಗೂಬಾಯಿ ಕೊಕರೆ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಮೇಲೆ ಸರಣಿ ರೀತಿಯಲ್ಲಿ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ. ಇಂತಹ ಕೀಳು ಧೋರಣೆ ಹೊಂದಿರುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ವಿಜಯ ದೇವತ್ಕಲ್, ಜಿಲ್ಲಾ ಜಂಟಿ ಕಾರ್ಯದರ್ಶಿ ದೇವಮ್ಮ, ಭಾಗ್ಯಶ್ರೀ, ಶಬಾನಾ, ರಜಿಯಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.