ಕಾರು ಪಲ್ಟಿಯಾಗಿ ಮರಕ್ಕೆ ಡಿಕ್ಕಿ: ಪ್ರೆಂಡ್ಸ್ ಡಾಬಾ ಮಾಲೀಕ ದುರ್ಮರಣ- ಮತ್ತಿಬ್ಬರ ಸ್ಥಿತಿ ಗಂಭೀರ
ವಿಜಯಪುರ: ಕಾರ್ ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದಾಗಿ ಕಾರ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಹಿರೇಮುರಾಳ ಬಳಿಯ ಮಸ್ಕ್ ಫೂಲ್ ಹತ್ತಿರ ನಡೆದಿದೆ.
ಜಿಲ್ಲೆಯ ಫ್ರೆಂಡ್ಸ್ ಡಾಬಾ ಮಾಲೀಕ ವೀರೇಶ ಪೇಟಗಾರ (30) ಸ್ಥಳದಲ್ಲೇ ಅಸುನೀಗಿದ್ದು, ಮುತ್ತು ರುದ್ರಗಂಟಿ (25), ಬಸಯ್ಯ ತೆಗ್ಗಿನಮಠ (27) ಸ್ಥಿತಿ ಗಂಭೀರವಾಗಿದೆ. ಇನ್ನು ಅಪಘಾತಕ್ಕೆ ಕಾರ್ ಅತೀ ವೇಗವೇ ಕಾರಣವಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡರು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.