ವಿನಯ ಕುಲಕರ್ಣಿ ಮನೆಗೆ ನಾಳೆ ಸಂತೋಷ ಲಾಡ: ಕಾಂಗ್ರೆಸ್ ಮುಖಂಡರೊಂದಿಗೂ ನಡೆಯಲಿದೆ ಮಾತುಕತೆ
1 min readಬೆಂಗಳೂರು: ಸಿಬಿಐ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿಯವರ ಧಾರವಾಡದ ನಿವಾಸಕ್ಕೆ ಮಾಜಿ ಸಚಿವ ಸಂತೋಷ ಲಾಡ ಭೇಟಿ ನೀಡಲಿದ್ದು, ಮುಂದಿನ ವಿಷಯಗಳ ಬಗ್ಗೆ ಜಿಲ್ಲೆಯ ಮುಖಂಡರೊಂದಿಗೆ ಮಾತುಕತೆ ಮಾಡಲಿದ್ದಾರೆಂದು ಗೊತ್ತಾಗಿದೆ.
ಶಿರಾ ಉಪಚುನಾವಣೆಯಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ್ದ ಸಂತೋಷ ಲಾಡ, ಚುನಾವಣೆಯ ಫಲಿತಾಂಶದ ನಂತರ ಜಿಲ್ಲೆಯತ್ತ ಬರಬೇಕೆಂದುಕೊಂಡಿದ್ದರು. ಆದರೆ, ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನವಾಗಿದ್ದರಿಂದ ತಕ್ಷಣವೇ ಜಿಲ್ಲೆಯತ್ತ ಪಯಣ ಬೆಳೆಸಿದ್ದಾರೆ.
ನಾಳೆ ಹನ್ನೆರಡು ಗಂಟೆಗೆ ಹುಬ್ಬಳ್ಳಿಗೆ ಬರಲಿರುವ ಸಚಿವ ಸಂತೋಷ ಲಾಡ, ತದನಂತರ ಮಧ್ಯಾಹ್ನದ ವೇಳೆ ಧಾರವಾಡದ ಬಾರಾಕೋಟ್ರಿಯಲ್ಲಿರುವ ವಿನಯ ಕುಲಕರ್ಣಿಯವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆಂಬ ಮಾಹಿತಿ ಲಭಿಸಿದೆ.
ಕುಟುಂಬದ ಸದಸ್ಯರು ಹಾಗೂ ಜಿಲ್ಲೆಯ ಪ್ರಮುಖರೊಂದಿಗೂ ಇದೇ ಸಮಯದಲ್ಲಿ ಮುಂದಿನ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.