Posts Slider

Karnataka Voice

Latest Kannada News

ಅಣ್ಣಿಗೇರಿಯಾತ ಜೀವಂತ ಗುಂಡು ಸಮೇತ ಸಿಕ್ಕಿದ್ದೇಲ್ಲಿ ಗೊತ್ತಾ..! ಅಂತೂರ-ಬೆಂತೂರಿನವನೂ ಇದ್ದಾನೆ..!

1 min read
Spread the love

ಬೆಳಗಾವಿ: ಕಾರು-ಬೈಕು ನಿಲ್ಲಿಸಿಕೊಂಡು ನಿಂತಿದ್ದ ಗುಂಪಿನಲ್ಲಿದ್ದ ಮೂವರು ಪೊಲೀಸರನ್ನ ನೋಡಿ ಓಡಿ ಹೋಗಿದ್ದು, ಉಳಿದವರನ್ನ ವಿಚಾರಣೆ ಮಾಡಿದಾಗ ಸೆಮಿ ಆಟೋಮೆಟಿಕ್ ನಾಡ ಪಿಸ್ತೂಲ್ ಸಮೇತ ಮೂರು ಜೀವಂತ ಗುಂಡುಗಳಿರುವುದು ಪತ್ತೆಯಾದ ಘಟನೆ ಖಾನಾಪುರ ತಾಲೂಕಿನ ಉಚ್ಚವಡೆ ಕ್ರಾಸ್ ಬಳಿ ನಡೆದಿದೆ.

ಖಾನಾಪುರ ಠಾಣೆ ಇನ್ಸಪೆಕ್ಟರ್ ಸುರೇಶ ಶಿಂಗಿ ಪೆಟ್ರೋಲಿಂಗ್ ಮಾಡುತ್ತಿದ್ದಾಗ ಘಟನೆ ನಡೆದಿದ್ದು, ಮೂವರು ತಪ್ಪಿಸಿಕೊಂಡಿದ್ದು, ನಾಲ್ವರನ್ನ ಬಂಧನ ಮಾಡಲಾಗಿದೆ. ಬಂಧಿತರನ್ನ ಚಂದಗಡ ತಾಲೂಕಿನ ಕಾಲಕುಂದ್ರಿ ಗ್ರಾಮದ ತುಳಸಿದಾಸ ಲಕ್ಷ್ಮಣ ಜೋಶಿ, ವಡಗಾಂವಿಯ ಸತೀಶ ಅಲಿಯಾಸ್ ಸಚಿವ ಸಿದ್ದಪ್ಪಾ ಡವಳೆ, ಧಾರವಾಡ ಜಿಲ್ಲೆ ಅಣ್ಣಿಗೇರಿಯ ಉಮೇಶ ನಿಂಗಪ್ಪ ಬಿಳೆಯಲಿ ಹಾಗೂ ಗದಗ ಜಿಲ್ಲೆ ಅಂತೂರ-ಬೆಂತೂರ ಗ್ರಾಮದ ಗುರುವಯ್ಯಾ ಶೇಖರಯ್ಯ ಲಗಮಯ್ಯನವರ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸೆಮಿ ಆಟೋಮೆಟಿಕ್ ನಾಡ ಪಿಸ್ತೂಲ್, ಮೂರು ಜೀವಂತ ಗುಂಡುಗಳು, ಮೊಬೈಲಗಳು ಹಾಗೂ 34ಸಾವಿರ ರೂಪಾಯಿ, ಟಾಟಾ ಇಂಡಿಕಾ ಕಾರು ಹಾಗೂ ಎರಡು ಬೈಕುಗಳನ್ನ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆಯಲ್ಲಿ ಇನ್ಸಪೆಕ್ಟರ್ ಸುರೇಶ ಶಿಂಗಿ, ಪಿಎಸೈ ಬಸನಗೌಡ ಪಾಟೀಲ, ಪ್ರೋಬೆಷನರಿ ಪಿಎಸೈ ಬಸಗೌಡ ನೇರ್ಲಿ, ಸಿಬ್ಬಂದಿಗಳಾದ ಎನ್.ಕೆ.ಪಾಟೀಲ, ಎಸ್.ಎಸ್.ತುರಮಂದಿ, ಎನ್.ಎ.ಚಂದರಗಿ, ಐ.ಎಂ.ನನ್ನೇಖಾನ, ಎಸ್.ಎಚ್.ಹಾದಿಮನಿ, ಮೆಹಬೂಬ ದಾದಾಮಲೀಕ, ಎಸ್.ಎಸ್.ಹುಂಬಿ, ಸಿದ್ರಾಮ ತಲ್ಲೂರ, ಎಸ್.ಸಿ.ಪೂಜಾರ  ಪಾಲ್ಗೊಂಡಿದ್ದರು.


Spread the love

Leave a Reply

Your email address will not be published. Required fields are marked *