ಜಿಲ್ಲಾ ಪಂಚಾಯತಿ ಕಚೇರಿಯಲ್ಲೇ ‘ಹಳ್ಳಿಮೇಷ್ಟ್ರ’ ಆಟ- ತಲೆತೆಗ್ಗಿಸುವ ವೀಡಿಯೋ ವೈರಲ್
1 min readಬಳ್ಳಾರಿ: ಜಿಲ್ಲಾ ಪಂಚಾಯತಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯೋರ್ವರು ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವ ಹೊಂದಾಣಿಕೆ ವೀಡಿಯೋ ವೈರಲ್ ಆಗಿದ್ದು, ಅಧಿಕಾರಿಗಳ ಕಚೇರಿ ಆಡಳಿತ ಬಹಿರಂಗವಾಗಿದೆ.
ಜಿಲ್ಲಾ ಪಂಚಾಯತಿ ಅಕೌಂಟ್ ಅಫೀಸರ್ ಸಂಪತ್ ಕುಮಾರ್ ಮತ್ತೊಂದು ಮುಖ ಈ ಮೂಲಕ ಬಯಲಾಗಿದೆ. ಕಚೇರಿಯಲ್ಲಿ ನಿತ್ಯವೂ ಖುಲ್ಲಾಂ ಖುಲ್ಲಾ ರೊಮಾನ್ಸ್ ನಡೆಯುತ್ತಿದ್ದು, ಇದನ್ನ ಮತ್ತೋರ್ವ ಸಿಬ್ಬಂದಿ ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆಂದು ಹೇಳಲಾಗಿದೆ.
ಕೆಲಸ ಮಾಡುತ್ತಲೇ ಮಹಿಳಾ ಸಿಬ್ಬಂದಿಯಿರುವ ಜಾಗದಲ್ಲಿ ಕೂತು ಮುತ್ತು ಕೊಡುವುದು, ಮೈ ಕೈ ಮುಟ್ಟಿ ಖುಷಿ ಪಡುವ ದೃಶ್ಯಗಳು ಚಿತ್ರೀತವಾಗಿವೆ. ಇಂತಹ ಅಸಹ್ಯಕರವಾಗಿ ನಡೆದುಕೊಳ್ಳುವ ಸರಕಾರಿ ನೌಕರ, ಈತರರಲ್ಲಿ ಅಸಹ್ಯ ಮೂಡಿಸಿದ್ದಾರೆ.
ಸಂಪತಕುಮಾರರ ಈ ವೀಡಿಯೋ ವೈರಲ್ ಆಗಿದ್ದರಿಂದ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಮುಜುಗರದ ವಾತವಾರಣ ಸೃಷ್ಠಿಯಾಗಿದೆ. ಇದು ಹಳೇಯ ವೀಡಿಯೋ ಎಂದು ಕೆಲವರು ಹೇಳುತ್ತಿದ್ದು, ಹಳೇಯದಾದರೂ ನಡೆದದ್ದು ಮಾತ್ರ ಸತ್ಯವಲ್ಲವೇ..