Posts Slider

Karnataka Voice

Latest Kannada News

ಸಂತೋಷ ಲಾಡ ಶಿರಾದಲ್ಲಿ – ನಾಗರಾಜ ಛಬ್ಬಿ ತಾವರಗೇರಿಯಲ್ಲಿ ಗ್ರಾಮ ವಾಸ್ತವ್ಯ.. ಕಾಂಗ್ರೆಸ್ ಅಂದ್ರೇ ಹೀಗೇನಾ..!

1 min read
Spread the love

ಮಾಜಿ ಸಚಿವ ಸಂತೋಷ ಲಾಡ ಕಲಘಟಗಿಗೆ ಬಂದು ನಾನೂ ಸಾಯುವವರೆಗೂ ಕ್ಷೇತ್ರವನ್ನ ಬಿಡೋದಿಲ್ಲ ಅಂತಾರೆ.. ಅವರಿಲ್ಲದೇ ನಾಗರಾಜ ಛಬ್ಬಿ ಗ್ರಾಮವಾಸ್ತವ್ಯ ಮಾಡ್ತಾರೆ.. ಧಾರವಾಡ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ ಸುಮ್ಮನಿರ್ತಾರೆ.. ವ್ಹಾ ಕಾಂಗ್ರೆಸ್ ವ್ಹಾ..

ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಕೆಪಿಸಿಸಿ ಆದೇಶದ ಮೇರೆಗೆ ಶಿರಾ ಉಪಚುನಾವಣೆಯಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅದೇ ವೇಳೆಯಲ್ಲಿ ಕಾಂಗ್ರೆಸ್ ಮುಖಂಡ ನಾಗರಾಜ ಛಬ್ಬಿ, ಸಂತೋಷ ಲಾಡ ಪ್ರತಿನಿಧಿಸಿದ್ದ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ.

ಈ ಎರಡು ಬೆಳವಣಿಗೆಗಳು ವ್ಯತಿರಿಕ್ತವಾಗಿ ನಡೆಯುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಜಿಗ ಮೂಡಿಸುತ್ತಿದ್ದರೇ, ವಿರೋಧಪಕ್ಷಗಳಲ್ಲಿ ನಗೆ ಬುಗ್ಗೆಯನ್ನ ಮೂಡಿಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ.

ಸಂತೋಷ ಲಾಡ ಕಳೆದ ಬಾರಿ ಕಲಘಟಗಿ ಕ್ಷೇತ್ರಕ್ಕೆ ಬಂದು ಹೋಗಿದ್ದು, ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಂದಾಗಲೂ ನೂರಾರೂ ಜನರೊಂದಿಗೆ ಬರಮಾಡಿಕೊಂಡಿದ್ದರು. ಇದೇ ವೇಳೆಯಲ್ಲಿ ನಾಗರಾಜ ಛಬ್ಬಿಯವರು ಕೂಡಾ ತಮ್ಮ ಬೆಂಬಲಿಗರೊಂದಿಗೆ ಬಂದು ಜೈ ಘೋಷ ಹಾಕಿದ್ರು.

ಇದೇಲ್ಲದರ ನಡುವೆಯೂ ಈ ಥರದ ಮನೋಭಾವನೆ ಬೆಳೆದು ಪಕ್ಷದ ಕಾರ್ಯಕರ್ತರಲ್ಲೇ ಆಂತರಿಕೆ ವೈಮನಸ್ಸು  ಬೆಳೆಸುವುದಕ್ಕೆ ಕಾರಣವಾಗುತ್ತಿದೆ. ಪಕ್ಷದ ಸಿದ್ಧಾಂತ ಮತ್ತೂ ಒಗ್ಗಟ್ಟಿನ ಮಂತ್ರವಿಲ್ಲದೇ ಏಕವ್ಯಕ್ತಿಗಳು ನಾಯಕರಾಗಲು ಸಾಧ್ಯವಿಲ್ಲವೆಂದು ಪ್ರಜ್ಞಾವಂತರಿಗೆ ಗೊತ್ತೆಯಿದೆ.

ಇಡೀ ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ ಕ್ಷೇತ್ರದ ಕಾಂಗ್ರೆಸ್ ಬಣಗಳ ಗುದ್ದಾಟ ಕೆಲವರಿಗೆ ರೋಚಕವಾಗಿಯೂ, ಇನ್ನೂ ಕೆಲವರಿಗೆ ಕಾಮಿಡಿಯಾಗಿಯೂ ಕಾಣಿಸುತ್ತಿರುವದರಲ್ಲಿ ಯಾವುದೇ ಸಂಶಯವಿಲ್ಲ…


Spread the love

Leave a Reply

Your email address will not be published. Required fields are marked *