ವಿನೋದ ಅಸೂಟಿಗೆ ‘ಟಿಕೆಟ್ ಕೊಡೋದಿಲ್ಲಾ” ಅಂದ್ರಾ Ex CM ಸಿದ್ಧರಾಮಯ್ಯ…
1 min read
ನವಲಗುಂದ: ಏ ವಿನೋದಾ.. ನಿನಗೆ ಟಿಕೆಟ್ ಕೊಡೋದಿಲ್ಲಾ.. ಹೋಗು ಆ ಕಡೆ… ಹೀಗೆ ಗರಮ್ಮಾಗಿದ್ದು ಬೇರಾರೂ ಅಲ್ಲ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು.
ಹೌದು.. ನವಲಗುಂದದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದ ಸಮಯದಲ್ಲಿ ಯುವ ಮುಖಂಡ ಹಾಗೂ ಮೂಲ ಕಾಂಗ್ರೆಸ್ಸಿಗ ವಿನೋದ ಅಸೂಟಿಯವರ ಬೆಂಬಲಿಗರು ಪದೇ ಪದೇ ಅವರ ಹೆಸರನ್ನ ಕೂಗುತ್ತಿದ್ದರು. ಇದರಿಂದ ಕೆಲವು ‘ಷಡ್ಯಂತ್ರಿ’ಗಳು ರೂಪಿಸಿದ ತಂತ್ರದಲ್ಲಿ ಸಿದ್ಧರಾಮಯ್ಯನವರು, ಅಸೂಟಿ ಹೆಸರು ಹೇಳಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಅಷ್ಟೇ ಅಲ್ಲದೇ, ಕುಡುಕರನ್ನ ಕರೆಸಿ ಕುಣಿಸ್ತೀರಾ ಎಂದು ವೇದಿಕೆಯಲ್ಲಿದ್ದ ಆಕಾಂಕ್ಷಿಗಳನ್ನ ಸಿದ್ಧರಾಮಯ್ಯನವರು ಪ್ರಶ್ನಿಸಿದ್ದರು. ಆ ಸಮಯದಲ್ಲಿ ವೇದಿಕೆಯಲ್ಲಿದ್ದ ಟಿಕೆಟ್ ಆಕಾಂಕ್ಷಿ ಕೋನರೆಡ್ಡಿ ಕೂಡಾ ಇದ್ದರು. ಇದೀಗ ವಿನೋದ ಅಸೂಟಿಯವರಿಗೆ ಗದರಿಸಿರುವ ವೀಡಿಯೋ ವೈರಲ್ ಆಗಿದೆ.
ನಾನು ಸೊಸೆಯಾಗಿ ಇರುತ್ತೇನೆ ಎಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿಯವರು, ಇದೀಗ ಮೂಲ ಕಾಂಗ್ರೆಸ್ಸೀಗರಿಗೆ ಟಿಕೆಟ್ ಸಿಗದ ಹಾಗೇ ಮಾಡಿ, ತಾವೂ ಟಿಕೆಟ್ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.