ಹುಬ್ಬಳ್ಳಿಯ ಮನೆಯಲ್ಲಿ “ಮೂರು ಕೋಟಿ” ನಗದು ಪತ್ತೆ….
1 min read
ಹುಬ್ಬಳ್ಳಿ: ನಗರದ ಮನೆಯೊಂದರಲ್ಲಿ ಬರೋಬ್ಬರಿ ಮೂರು ಕೋಟಿ ರೂಪಾಯಿ ನಗದು ಸಿಕ್ಕಿದ್ದು, ಸಿಸಿಬಿ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಪತ್ತೆಯಾಗಿದೆ.
ಉದ್ಯಮಿ ರಮೇಶ ಬೋಣಗೇರಿ ಎಂಬುವವರ ಮನೆಯಲ್ಲಿ ನಗದು ಇರುವುದು ಪತ್ತೆಯಾಗಿದ್ದು, ಮೂರು ಕೋಟಿ ನಗದಿಗೆ ಸದ್ಯ ಯಾವುದೇ ದಾಖಲೆ ಇಲ್ಲದಿರುವುದು ಕಂಡು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಎಸಿಪಿ ನಾರಾಯಣ ಭರಮನಿಯವರು ದಾಳಿ ಮಾಡಿದ್ದು, ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ಮುಂದುವರೆದಿದೆ.