“3 ಕೋಟಿ” ಅಸಲಿಯತ್ತು ಬಿಚ್ಚಿಟ್ಟ ಕಮೀಷನರ್: ಅಷ್ಟು ನೋಟು ಎಣಿಸಿದ್ದು ಯಾರೂ ಗೊತ್ತಾ… Exclusive video
1 min read
ಹುಬ್ಬಳ್ಳಿ: ಭವಾನಿನಗರದಲ್ಲಿನ ಉದ್ಯಮಿಯ ಮನೆಯಲ್ಲಿ ಸಿಕ್ಕ ಮೂರು ಕೋಟಿಯ ನಗದಿನ ಬಗ್ಗೆ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು ಸಂಪೂರ್ಣ ವಿವರವನ್ನ ಹೇಳಿದ್ದಾರೆ.
ರಮೇಶ ಬೋಣಗೇರಿ ಹಾಗೂ ಅವರ ಪುತ್ರ ಅಮೃತ ಬೋಣಗೇರಿಯವರ ಮನೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಣ ಸಿಕ್ಕ ಬಗ್ಗೆ ಕಮೀಷನರ್ ರಮಣ ಗುಪ್ತಾ ಅವರು, ವಿವರದ ಜೊತೆಗೆ ಎಸಿಪಿ ನಾರಾಯಣ ಭರಮನಿ ಅವರ ತಂಡಕ್ಕೆ 25 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದರು.
ಪೂರ್ಣವಾದ Exclusive ವೀಡಿಯೋ ಇಲ್ಲಿದೆ..
ರಮೇಶ ಬೋಣಗೇರಿಯವರ ಮನೆಯಲ್ಲಿ ಇಷ್ಟೊಂದು ಹಣ ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ಎಸಿಪಿ ನಾರಾಯಣ ಭರಮನಿ ತಂಡ ದಾಳಿ ಮಾಡಿ, ಸ್ವತಃ ನೋಟನ್ನ ಯಂತ್ರದ ಮೂಲಕ ಎಣಿಸುವಂತಾಯಿತು. ದಕ್ಷ ಅಧಿಕಾರಿಯಿಂದ ದೊಡ್ಡಮಟ್ಟದ ಹಣ ಸಿಕ್ಕಿದೆ. ಆದರೆ, ಇದರ ಅಸಲಿಯತ್ತು ಹೊರಗೆ ಬರಬೇಕಿದೆ.
ಈ ರಮೇಶ ಬೋಣಗೇರಿಯ ಸಹೋದರನಾದ ಸುರೇಶ ಬೋಣಗೇರಿ ಕೆಲವು ದಿನಗಳ ಹಿಂದೆ ಇಬ್ಬರು ದಂಪತಿಗಳನ್ನ ಕೂಡಿ ಹಾಕಿ, ಜೈಲು ಪಾಲಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.