ಮತ್ತಷ್ಟು ಶಿಕ್ಷಕರಿಗೆ ಕೊರೋನಾ ಪಾಸಿಟಿವ್: ಹಲವು ಶಾಲೆಗಳು ಬಂದ್
1 min readಚಿಕ್ಕಮಗಳೂರು: ಜಿಲ್ಲೆಯ ಮೂಡಗೆರೆ ತಾಲೂಕಿನ ನಿಡುವಾಳೆ ಸರ್ಕಾರಿ ಹಿರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕನಿಗೂ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶಾಲೆಯನ್ನ ಬಂದ್ ಮಾಡಲಾಗಿದೆ.
ಕಳಸದ ಇಬ್ಬರು ಶಿಕ್ಷಕರಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಕಳಸ ಪಟ್ಟಣದ JEM ಶಾಲೆಯ ಶಿಕ್ಷಕರಿಗೆ ಸೋಂಕು ದೃಢವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂವರು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಾತಾಗಿದೆ.
ಶಾಲೆಯಲ್ಲಿ 15 ಜನ ಶಿಕ್ಷಕರಿದ್ರು. ಅದ್ರಲ್ಲಿ ಇಬ್ಬರು ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಇನ್ನುಳಿದ 13 ಶಿಕ್ಷಕರಿಗೆ ಕೊರೋನಾ ನೆಗೆಟಿವ್ ಆಗಿತ್ತು. ಅದೇ ಸಮಯದಲ್ಲಿ ಒಂದು ದಿನ ಶಾಲೆ ನಡೆದಿತ್ತು, ಶಾಲೆಗೂ ಮಕ್ಕಳು ಬಂದಿದ್ರು, ಸೋಜಿಗವೆಂದರೇ ಕೊರೋನಾ ಪಾಟಿಸಿವ್ ಬಂದ ಶಿಕ್ಷಕರು ಕೂಡ ಶಾಲೆಗೆ ಬಂದಿದ್ರು ಇದರಿಂದ ಮತ್ತೆ ಭಯ ಆರಂಭಗೊಂಡಿದ್ದು, ಶಾಲೆಯನ್ನೇ ಬಂದ್ ಮಾಡಲಾಗಿದೆ.
ಹಾವೇರಿ:
ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ. ಮಕ್ಕಳ ಸ್ವ್ಯಾಬ್ ಕಲೆಕ್ಟ್ ಮಾಡ್ತಿರೋ ಆರೋಗ್ಯ ಇಲಾಖೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ಸರಕಾರಿ ಶಾಲೆಯಲ್ಲಿ ಕೆಲೆಕ್ಟ್. ಶಾಲೆ ಆರಂಭದ ನಂತರ ಶಾಲೆಗೆ ಬಂದಿದ್ದ ಓರ್ವ ಶಿಕ್ಷಕರಲ್ಲಿ ದೃಢಪಟ್ಟಿರೋ ಸೋಂಕು. ಶಿಕ್ಷಕರೊಬ್ಬರಿಗೆ ಸೋಂಕು ದೃಢಪಟ್ಟಿದ್ದರಿಂದ ಶಾಲೆಗೆ ಬಂದಿದ್ದ 23 ಮಕ್ಕಳ ಸ್ವ್ಯಾಬ್ ಕಲೆಕ್ಟ್. ಮಕ್ಕಳ ಜೊತೆಗೆ ಉಳಿದ ಆರು ಜನ ಶಿಕ್ಷಕರಿಗೆ ಮತ್ತೊಮ್ಮೆ ಕೋವಿಡ್ ಟೆಸ್ಟ್. ಸ್ವ್ಯಾಬ್ ಕಲೆಕ್ಟ್ ನಂತರ ಒಂದು ವಾರಗಳ ಕಾಲ ಶಾಲೆ ಬಂದ್.
ಹಾವೇರಿ:
ಇಬ್ಬರು ಶಿಕ್ಷಕರಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ. ಹಾವೇರಿ ಜಿಲ್ಲೆಯಲ್ಲಿ ಎರಡು ಶಾಲೆಗಳು ಬಂದ್. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಎರಡು ಶಾಲೆಗಳು ಬಂದ್. ಒಂದು ಸರಕಾರಿ ಮತ್ತು ಒಂದು ಖಾಸಗಿ ಶಾಲೆ ಬಂದ್. ಶಾಲೆ ಆರಂಭದ ನಂತರ ಇಬ್ಬರು ಶಿಕ್ಷಕರಿಗೆ ಕೊರೋನಾ ಪಾಸಿಟಿವ್. ಶಾಲೆಗೆ ಬಂದಿದ್ದ 23 ಮಕ್ಕಳನ್ನ ಕೋವಿಡ್ ಟೆಸ್ಟ್ ಮಾಡಿಸುವಂತೆ ಸೂಚನೆ. ಪಾಸಿಟಿವ್ ಬಂದ ಶಿಕ್ಷಕರಿಗೆ ಹೋಂ ಐಸೋಲೇಶನ್. DDPI ಆನಂದಪ್ಪ ವಡಗೆರಿ ಬಿಟಿವಿಗೆ ಮಾಹಿತಿ.