ಶಿಕ್ಷಕರ ಸಂಘದ ಚುನಾವಣೆ: ಹೊರಬಿತ್ತು ಪ್ರಣಾಳಿಕೆ
1 min readಹುಬ್ಬಳ್ಳಿ: ಶಿಕ್ಷಕರ ಚುನಾವಣೆಯ ದಿನಾಂಕ ಆಗಿತ್ತಿದಂತೆ ಶಿಕ್ಷಕರ ಸಂಘಗಳು ತಮ್ಮದೇ ಆದ ರೀತಿಯಲ್ಲಿ ಮನವೊಲಿಸುವ ಪ್ರಯತ್ನಕ್ಕೆ ಇಳಿಯುವುದು ರೂಢಿ. ಆದರೆ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹೊಸದೊಂದು ರೀತಿಯಲ್ಲಿ ಚಾಲನೆ ನೀಡಿದ್ದು, ತಮ್ಮ ಪ್ರಣಾಳಿಕೆಯನ್ನ ಮುಂದಿಟ್ಟು ಮತ ಕೇಳಲಿದ್ದಾರೆ.
ಈ ಬಗ್ಗೆ ಸಂಘದ ಪ್ರಣಾಳಿಕೆಯಲ್ಲಿ ಏನೇನಿದೆ ನೀವೇ ನೋಡಿ..
ಶಿಕ್ಷಕರ ಸಂಘದ ಚುನಾವಣೆ.೨೦೨೦-೨೦೨೫
ಚುನಾವಣಾ ಪ್ರಣಾಳಿಕೆ
೦೧.ನಿಯಮಿತವಾಗಿ ವರ್ಗಾವಣೆ ನಡೆಸುವುದು
೦೨.ನಿಯಮಿತವಾಗಿ ಪದೋನ್ನತಿ ನೀಡಬೇಕು
೦೩.ವಿಕಲಚೇತನ ಶಿಕ್ಷಕರ ಅಳಲಿಗೆ ತತ್ ಕ್ಷಣ ಸ್ಪಂದಿಸುವುದು
೦೪.ಅಂತರ್ ಜಿಲ್ಲಾ ಸೇವಾ ಜೇಷ್ಠತೆ ಪರಿಗಣಿಸಲು ಆಗ್ರಹ
೦೫.ಪ್ರಶಸ್ತಿಗಳನ್ನು ಸರ್ಕಾರವೇ ಗುರುತಿಸಿ ಕೊಡಬೇಕು
೦೬.ಬೇಸಿಗೆ ಅವಧಿಯಲ್ಲಿ ರಾಜ್ಯಾದ್ಯಂತ ಏಕ ರೂಪ ಸಮಯ ನಿಗದಿಯಾಗಬೇಕು (ಮುಂಜಾನೆ)
೦೭.ಅನ್ಯಾಯ, ಶೋಷಣೆ ದೂಷಣೆಗೊಳಗಾದವರಿಗೆ ತತ್ ಕ್ಷಣ ಸ್ಪಂದಿಸುವುದು
೦೮.ಶಿಕ್ಷಕರಿಂದ ಹಣ ಸಂಗ್ರಹಿಸಿ ದುಂದುವೆಚ್ಚ..ಆಡಂಬರ. ವೈಭವೀಕರಣ ಅರ್ಥವಿಲ್ಲದ ಗೊತ್ತು ಗುರಿಯಿಲ್ಲದ ಸಭೆ ಸಮಾರಂಭಗಳನ್ನು ಹತ್ತಿಕ್ಕುವುದು
೦೯.ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಿಗಳವರನ್ನು ಆಹ್ವಾನಿಸಿ ರಾಜ್ಯದ ಸಮಸ್ಯೆಗಳನ್ನು ಅವರಿಗೆ ಮನವರಿಕೆ ಮಾಡುವುದು
೧೦.ಚುನಾವಣಾ ಕರ್ತವ್ಯ ಕುರಿತು ಓಓಡಿ ಸೌಲಭ್ಯ
೧೧.ಚುನಾವಣೆ ಕರ್ತವ್ಯಕ್ಕೆ ಹಾಗೂ ಜನಗಣತಿ ಕಾರ್ಯಕ್ಕೆ ೫೫ ವಯಸ್ಸಿನ ಹಾಗೂ ಅನಾರೋಗ್ಯ..ಗರ್ಭಿಣಿಯರು ಚಿಕ್ಕಮಕ್ಕಳನ್ನು ಹೊಂದಿರುವವರಿಗೆ ರಿಯಾಯತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸುವುದು
೧೨.ಚುನಾವಣಾ ಕರ್ತವ್ಯದ ಗೌರವಧನ ಹೆಚ್ಚಿಸಲು ಘನ ಸರ್ಕಾರಕ್ಕೆ ಆಗ್ರಹಿಸುವುದು
೧೩.ಪೂರ್ವಾಗ್ರಹ ಪೀಡಿತರಾಗಿ ಮುಗ್ಧರ ಮೇಲೆ ಕ್ರಮ ಜರುಗಿಸುವ ವ್ಯವಸ್ಥೆಗೆ ಕಡಿವಾಣ ಹಾಕುವುದು
೧೪.ಗ್ರಾಮೀಣ ಭತ್ಯೆ ರೂ.೫೦೦೦ ಕ್ಕಾಗಿ ಸರ್ಕಾರಕ್ಕೆ ಮನವಿ
೧೫.ಕ.ರಾ.ಸ.ನೌ.ಸಂಘಕ್ಕೆ ಬೇಡಿಕೆಗಳನ್ನು ಸಲ್ಲಿಸಿ ಈಡೇರಿಕೆಗಾಗಿ ಒತ್ತಾಯಿಸುವುದು
೧೬.ನಲಿ ಕಲಿ ಗೊಂದಲಗಳಿಗೆ ಇತಿಶ್ರೀ ಹಾಡುವುದು
೧೭.ನಾಲ್ಕು ವಿಭಾಗಗಳಿಗೆ ಒಂದರಂತೆ ಎಚ್ ಆರ್.ಎಮ್.ಎಸ್.ಯುನಿಟ್ ಪ್ರಾರಂಭಿಸಬೇಕು
೧೮.ನಾಲ್ಕು ವಿಭಾಗಗಳಿಗೆ ಒಂದರಂತೆ ಬೃಹತ್ ಶಿಕ್ಷಕ ಸದನ ನಿರ್ಮಿಸಿಕೊಡಲು ಹೋರಾಟ ಮಾಡುವುದು
೧೯.ಬಿ.ಆರ್.ಸಿ/ಸಿ.ಆರ್.ಸಿ ಗಳನ್ನು ಉನ್ನತ ದರ್ಜೆಗೆ ಹೆಚ್ಚಿಸಬೇಕೆಂದು ಒತ್ತಾಯಿಸುವುದು
೨೦.ಎನ್.ಪಿ.ಎಸ್. ಓ.ಪಿ.ಎಸ್ ಪದವೀಧರರ ಹಿಂದಿ.ಜಿಪಿಟಿ..ಟಿಜಿಟಿ .ದೈ.ಶಿ.ಶಿ ಇವರುಗಳ ಹೋರಾಟಕ್ಕೆ ಬೆಂಬಲಿಸುವುದು
೨೧.ಶಿಕ್ಷಕರ ಮಕ್ಕಳ ಅನುಪಾತ..ಇಪ್ಪತ್ತಕ್ಕೆ ಒಬ್ಬರಂತೆ ಇಳಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದು
೨೨.ಗ್ರಾಮೀಣ ಕೃಪಾಂಕ ಸಹಿತ ಹಾಗೂ ರಹಿತ ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡಲು ಶ್ರಮ ವಹಿಸುವುದು
೨೩.ಕೆ.ಪಿ.ಎಸ್.ಗಳಿಗೆ.ಎನ್.ಜಿ.ಎಚ್.ಎಮ್.ಹುದ್ದೆ ಮಂಜೂರಿಸಲು ಸರ್ಕಾರಕ್ಕೆ ಆಗ್ರಹಿಸುವುದು
೨೪.ಮುಖ್ಯೋಪಾಧ್ಯಾಯರಿಗೆ ಪ್ರತ್ಯೇಕ ವೇತನ ಶ್ರೇಣಿ ನೀಡಲು ಸರ್ಕಾರಕ್ಕೆ ಒತ್ತಾಯಿಸುವುದು
೨೫.ಮುಖ್ಯ ಶಿಕ್ಷಕರಿಗೆ ಸ್ಮಾರ್ಟ ಫೋನ್ ನೀಡಬೇಕು
೨೬.ಪ್ರಾ.ಶಾ.ಶಿಕ್ಷಕರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಲೇಬೇಕು ಆಗ್ರಹ
೨೭.ಖಾಸಗಿ ಶಾಲೆಗಳಿಗೆ ಅನುಮತಿ ಕೊಡಬಾರದು
೨೮.ಶಿಕ್ಷಕರ ಆಯೋಗ ರಚಿಸಲು ಆಗ್ರಹ
೨೯.ಶಿಕ್ಷಕರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ಧನ ಹೆಚ್ಚಿಸಲು ಒತ್ತಾಯಿಸುವುದು
೩೦.ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿಗಳನ್ನು ನೀಡಲು ಒತ್ತಾಯಿಸುವುದು
೩೧.ಕ್ಲಸ್ಟರ್ ಗೆ ಒಂದು ಡಿಜಿಟಲ್ ಶಾಲೆ ಪ್ರಾರಂಭಿಸಬೇಕು
೩೨.ಹೊಸ ೪೯ ತಾಲೂಕುಗಳಿಗೆ ಬಿ.ಇ.ಓ.ನೇಮಿಸಲು ಹಕ್ಕೊತ್ತಾಯ
೩೩.ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಶಾಲೆಗಳ ಶಾಲೆ ಇದೆ ನಿಧಾನವಾಗಿ ಸಾಗಿ ನಾಮಫಲಕ ಹಾಕಲು ಆಗ್ರಹುಸುವುದು
೩೪.ಐದು ಶೈಕ್ಷಣಿಕ ವಲಯಗಳಿಗೆ ಒಬ್ಬರಂತೆ ಡಿ.ಡಿ.ಪಿ.ಆಯ್.ನೇಮಿಸಲು ಒತ್ತಾಯಿಸುವುದು
೩೫.ಮೂವತ್ತು ವರ್ಷ ಸೇವೆ ಪೂರೈಸಿದ ಶಿಕ್ಷಕರಿಗೆ ಶೇ.೩೦ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹುದ್ದೆಗೆ ನೇರ ಪದೋನ್ನತಿ ಕೊಡಲು ಹಕ್ಕೊತ್ತಾಯ ಮಾಡುವುದು*
೩೬.ರಾಜ್ಯದ ಎಲ್ಲಾ ಬಿ.ಆರ್.ಸಿ.ಗಳಿಗೆ ಸರ್ಕಾರಿ ಜೀಪ್ ಪೂರೈಸಬೇಕು.ಹಾಗೂ ಎಲ್ಲಾ ಬಿ.ಆರ್.ಪಿ.ಸಿ.ಆರ್.ಪಿ.ಗಳಿಗೆ ಸರ್ಕಾರಿ ದ್ವಿಚಕ್ರವಾಹನ ಪೂರೈಸಬೇಕು
೩೭.ಶಿಕ್ಷಕರು ಹಾಗೂ ಅವರ ಕುಟುಂಬಕ್ಕೆ ರಾಜ್ಯಾದ್ಯಂತ ಉಚಿತ ಪ್ರವಾಸ ಯೋಜನೆ ಜಾರಿಗೊಳಿಸಬೇಕು
೩೮.ಗೃಹ ಸಾಲ..ವಾಹನ ಸಾಲ..ನಿವೇಶನ ಸಾಲ ವಿದ್ಯಾಭ್ಯಾಸಕ್ಕಾಗಿ ಸಾಲ ಅತೀ ಕಡಿಮೆ ಬಡ್ಡಿ ದರದಲ್ಲಿ ನೀಡಬೇಕು
ಈ ಮೇಲಿನ ಪ್ರಣಾಳಿಕೆಯಲ್ಲಿರುವ ಎಲ್ಲಾ ಅಂಶಗಳನ್ನು ಘನ ಸರ್ಕಾಕ್ಕೆ ಒತ್ತಾಯಿಸಿ ಆಗ್ರಹಿಸಿ ವಿವಿಧ ಹಂತದ ಸತ್ಯಾಗ್ರಹ ಚಳುವಳಿ ಹೋರಾಟಗಳ ಮೂಲಕ ಸತತ ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದೊಂದಿಗೆ ತನು ಮನ ಧನದಿಂದ ಸೇವೆಯೇ ದೇವರು ಎಂಬ ತತ್ವದಡಿ ನಾವು ನಿಮ್ಮೊಂದಿಗೆ.ನಮ್ಮನ್ನು ಹರಸಿ ಆಶೀರ್ವಾದಿಸಿರಿ.
ತಮ್ಮ ವಿಶ್ವಾಸಿಕರು
ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು
ಹಾಗೂ ಸರ್ವ ಪದಾಧಿಕಾರಿಗಳು
ಕ.ಸ.ಗ್ರಾ.ಪ್ರಾ.ಶಾಲಾ.ಶಿಕ್ಷಕರ ಸಂಘ ರಿ
ರಾಜ್ಯ ಘಟಕ, ಹುಬ್ಬಳ್ಳಿ ಕಸಗ್ರಾಪ್ರಾಶಾಶಿಸಂಘ