ಕುಸಿದು ಬಿದ್ದ ಸಚಿವ ಸದಾನಂದಗೌಡ: ಸ್ಥಿತಿ ಗಂಭೀರ

ಚಿತ್ರದುರ್ಗ: ಭಾರತೀಯ ಜನತಾ ಪಕ್ಷದಲ್ಲಿ ಶಿವಮೊಗ್ಗದ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಬರುತ್ತಿದ್ದ ವೇಳೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕುಸಿದು ಬಿದ್ದಿದ್ದು, ಆರೋಗ್ಯದಲ್ಲಿ ತೀವ್ರ ಥರದ ಏರುಪೇರಾದ ಘಟನೆ ನಡೆದಿದೆ.
ಚಿತ್ರದುರ್ಗದ ನವೀನ್ ರೆಸಿಡೆನ್ಸಿ ಬಳಿ ಕಾರಿನಿಂದ ಇಳಿಯುವಾಗ ಕುಸಿದು ಬಿದ್ದ ಕೇಂದ್ರ ಸಚಿವ ಸದಾನಂದಗೌಡ ಅವರು ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತಕ್ಷಣವೇ ಚಿತ್ರದುರ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಲೋ ಬಿಪಿಯಿಂದ ಹೀಗೆ ಆಗಿದೆ ಎಂದು ಹೇಳಲಾಗುತ್ತಿದೆ.
ಸದಾನಂದಗೌಡರು, ಕಾರಿನಿಂದ ಇಳಿಯುವಾಗ ಕುಸಿದು ಬಿದ್ದ ಪರಿಣಾಮ ಹೀಗೆ ಆಗಿದ್ದು, ಸ್ಥಳೀಯ ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸಧ್ಯ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.