Posts Slider

Karnataka Voice

Latest Kannada News

ಗಂಡನನ್ನ ಕೊಂದ್ಲು- ಕಾರಲ್ಲಿಟ್ಟು ಬೆಂಕಿ ಹಚ್ಚಿದ್ಲು: ಪೊಲೀಸರು ಸುಮ್ಮನೆ ಇರ್ತಾರಾ..!

1 min read
Spread the love

ಹಾಸನ: ಏಳು ಜನ್ಮಕ್ಕೂ ನೀನೇ ನನ್ನ ಗಂಡನಾಗಿರಬೇಕೆಂದು ಹಸೆಮಣೆ ಏರಿದ್ದ ಪತ್ನಿಯೇ ತನ್ನ ಗಂಡನನ್ನ ಕೊಲೆ ಮಾಡಿ, ಕಾರಿನೊಳಗಿಟ್ಟು ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಡ ಸತ್ತಿದ್ದಾನೆಂದು ಪ್ರೂ ಮಾಡಲು ಹೋಗಿದ್ದವರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾದ ಘಟನೆ ನಡೆದಿದೆ.

ವ್ಯಕ್ತಿ ಸಮೇತವಾಗಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಹೆಂಡತಿಯೇ ಗಂಡನನ್ನು ಹತ್ಯೆಗೈದು, ಕಾರಿನಲ್ಲಿ ಶವವಿಟ್ಟು ಕಾರಿಗೆ ಬೆಂಕಿ ಹಚ್ಚಿದ್ದಾಳೆ ಎಂಬುದೀಗ ಬಹಿರಂಗವಾಗಿದೆ. ಅ.28ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ರಸ್ತೆಯಲ್ಲಿ ಸುಟ್ಟುಕರಕಲಾದ ಕಾರು ಹಾಗೂ ಕಾರಿನ ಡಿಕ್ಕಿಯಲ್ಲಿ ಗುರುತು ಸಿಗದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತ ವ್ಯಕ್ತಿ ದಿನೇಶ್ ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರಿನಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷಗಳ ಹಿಂದೆ ಅಭಿಲಾಷಾ ಎಂಬಾಕೆಯನ್ನು ವಿವಾಹವಾಗಿದ್ದ. ದಿನೇಶ್ ಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ, ಇತ್ತೀಚೆಗೆ ಎರಡನೇ ಮದುವೆಯಾಗಿದ್ದ ದಿನೇಶ್ ಮೊದಲ ಪತ್ನಿ ಹಾಗೂ ಮಕ್ಕಳಿಂದ ದೂರವುಳಿದಿದ್ದ.

ಪತಿಯ ಎರಡನೇ ಮದುವೆ ವಿಚಾರದಿಂದ ನೊಂದ ಅಭಿಲಾಷಾ, ಪತಿ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಅ.27ರಂದು ಪತಿಯನ್ನು ಮನೆಗೆ ಕರೆಸಿ ಮಧ್ಯಪಾನ ಮಾಡಿಸಿದ್ದಾಳೆ. ನಂತರ ತನ್ನ ತಂದೆ ಹಾಗೂ ತಮ್ಮನ ಜೊತೆ ಸೇರಿ ಪತಿಯ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ.

ಹತ್ಯೆ ಬಳಿಕ ಪತಿಯ ಶವವನ್ನು ಕಾರಿನ ಡಿಕ್ಕಿಯಲ್ಲಿಟ್ಟು ಚನ್ನರಾಯಪಟ್ಟಣದ ರಸ್ತೆಗೆ ತಂದು ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ. ಕಾರಿನ ಚೆಸ್ಸಿ ನಂಬರ್ ಸಹಾಯದಿಂದ ಆರೋಪಿಗಳ ಸುಳಿವು ಪತ್ತೆ ಹಚ್ಚಿದ ಹೀರಿಸಾವೆ ಪೊಲೀಸರು ಅಭಿಲಾಷಾ ಹಾಗೂ ಆಕೆಯ ತಂದೆ, ತಮ್ಮನನ್ನು ಬಂಧಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed