ನವಲಗುಂದ ಬಳಿ ಕಾರು ಪಲ್ಟಿ- ಜೆಸಿಬಿ ಏರಿಸಲು ಹಾಕಿದ್ದ ಮಣ್ಣೆ ಕಾರಣ

ಧಾರವಾಡ: ಗದಗ ಜಿಲ್ಲೆಯ ನರಗುಂದದಿಂದ ನವಲಗುಂದ ತಾಲೂಕಿನ ಹೆಬಸೂರ ಗ್ರಾಮಕ್ಕೆ ಬರುತ್ತಿದ್ದ ಕಾರೊಂದು ರಸ್ತೆಯ ಪಕ್ಕದಲ್ಲಿ ಹಾಕಿದ್ದ ಮಣ್ಣಿನ ಗುಡ್ಡೆಯ ಮೇಲೆ ಹೋದ ಪರಿಣಾಮ ಕಾರು ಪಲ್ಟಿಯಾದ ಘಟನೆ ಬೆಳವಟಗಿ ಕ್ರಾಸ್ ಬಳಿ ಸಂಭವಿಸಿದೆ.
ನರಗುಂದ ಮೂಲದ ಅಶೋಕ ಹೊಸಮನಿ ಎಂಬುವವರಿದ್ ವಾಹನ ಪಲ್ಟಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆಯ ಪಕ್ಷದಲ್ಲಿ ಜೆಸಿಬಿಯನ್ನ ಲಾರಿಗೆ ಹಾಕುವುದಕ್ಕಾಗಿ ಮಣ್ಣು ಹಾಕಿ, ಅದನ್ನ ತೆಗೆಯದ ಪರಿಣಾಮ ಈ ಘಟನೆ ನಡೆದಿದೆ.
ಕಾರು ಸಂಪೂರ್ಣವಾಗಿ ಉಲ್ಟಾ ಆಗಿ ಬಿದ್ದಿದ್ದು, ರಸ್ತೆ ಸಂಚಾರಕ್ಕೆ ಕೆಲಕಾಲ ಅಡಚಣೆ ಉಂಟಾಗಿತ್ತು. ಬಸ್ಸಗಳು ಸಂಚಾರ ಮಾಡಲು ತೊಂದರೆ ಅನುಭವಿಸುವಂತಾಯಿತು.