Posts Slider

Karnataka Voice

Latest Kannada News

ಮಾಜಿ ಮುಖ್ಯಮಂತ್ರಿ ನಿಧನ- ಜಗದೀಶ ಶೆಟ್ಟರ ಸಂತಾಪ

1 min read
Spread the love

ಹುಬ್ಬಳ್ಳಿ: ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್(92) ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.

ಎರಡು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನೆಡೆಸಿದ ಕೇಶುಭಾಯ್ ಪಟೇಲ್ ಉತ್ತಮ ಸಂಘಟನಕಾರ ಹಾಗೂ ರಾಜಕೀಯ ನೇತಾರರಾಗಿದ್ದರು. ಗುಜರಾತ್ ರಾಜ್ಯದಲ್ಲಿ ಬಿ.ಜೆ.ಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಶ್ರಮ ಅಪಾರವಾದುದು. 92ರ ಇಳಿ ವಯಸ್ಸಿನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದರು. ಅಕ್ಟೋಬರ್ 29 ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಸ್ಪಂದಿಸದೆ ನಿಧನರಾಗಿರುವುದು ತುಂಬಾ ದುಃಖಕರವಾಗಿದೆ.  ರಾಜಕೀಯ ಮುತ್ಸದ್ದಿಯ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಕುಟುಂಬ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ಕೇಶುಬಾಯಿ ಪಟೇಲ್ ಬಿಜೆಪಿಯಿಂದ ಎರಡು ಬಾರಿ ಗುಜರಾತನಲ್ಲಿ ಸಿಎಂ ಆಗಿ ಅಧಿಕಾರ ನಡೆಸಿದ್ದರು. ಅವರಿಗೆ ಕ್ಯಾನ್ಸರ್ ಕೂಡಾ ಇತ್ತೆಂದು ಅವರ ಪುತ್ರ ಭರತ ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *