Posts Slider

Karnataka Voice

Latest Kannada News

ಹುಬ್ಬಳ್ಳಿಯ ಅಸಹಜ ಸಾವು- ಕೊಲೆಯಂದು ಗೊತ್ತಾಗಿದ್ದು ಹೇಗೆ.. ಎಕ್ಸಕ್ಲೂಸಿವ್ ವೀಡಿಯೋ ಸಮೇತ

1 min read
Spread the love

ಹುಬ್ಬಳ್ಳಿ: ಇಂತಹದೊಂದು ಘಟನೆ ವಾಣಿಜ್ಯನಗರಿಯಲ್ಲೂ ಯಾವತ್ತೂ ನಡೆದಿರಲೇ ಇಲ್ಲ. ಕೆಲವು ವರ್ಷಗಳ ಹಿಂದೆ ಚಲವಾದಿ ಕುಟುಂಬವೊಂದು ಅಪಘಾತದ ಸೀನ್ ಕ್ರಿಯೇಟ್ ಮಾಡಿ, ಕೊಲೆಯೊಂದನ್ನ ಮಾಡಿದ್ರು. ಅದನ್ನ ಆಗೀನ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಎಚ್.ಕೆ.ಪಠಾಣ ಕಂಡು ಹಿಡಿದು, ಆರೋಪಿಗಳನ್ನ ಹೆಡಮುರಿಗೆ ಕಟ್ಟಿದ್ದರು. ಅದಾದ ನಂತರ ಸೋಜಿಗಪಡುವಂತ ಘಟನೆಯೊಂದನ್ನ ಪೊಲೀಸರು ಪತ್ತೆ ಹಚ್ಚಿದ್ದು, ಎಲ್ಲರೂ ಶಹಬ್ಬಾಸ್ ಎನ್ನುವಂತೆ ಮಾಡಿದ್ದಾರೆ.

ಎಕ್ಸಕ್ಲೂಸಿವ್ ಸಿಸಿಟಿವಿ ದೃಶ್ಯ

ಅಸಲಿಗೆ ನಡೆದದ್ದೇನು..

ಕೇಶ್ವಾಪುರದ ಶಕ್ತಿ ಬಾರ್ ಬಳಿಯಿರುವ ಡ್ರೀಮ್ಸ್ ಪ್ಲಾಜಾದ ನೆಲಮಹಡಿಯಲ್ಲಿ ಓರ್ವ ಕೆಳಗಿಂದ ಮೇಲೆ ಮೇಲಿಂದ ಕೆಳಗೆ ಇನ್ನೋಬ್ಬನನ್ನ ಆಸ್ಪತ್ರೆಗೆ ದಾಖಲು ಮಾಡಲು ಪ್ರಯತ್ನ ಮಾಡುತ್ತಿರುತ್ತಾನೆ. ಅಷ್ಟರಲ್ಲಿಯೇ ಕೇಶ್ವಾಪುರದ ಅಧಿಕಾರಿಯೋರ್ವರು ಬಂದು, ಯಾಕೋ ಏನಾಗಿದೆ ಎಂದು ಕೇಳುತ್ತಾರೆ. ಮೊದಲಿಂದಲೂ ಅತ್ತಿಂದಿತ್ತ ಅಲೆದಾಡುತ್ತಿದ್ದ ವ್ಯಕ್ತಿ, ನಂಗೇನು ಗೊತ್ತಿಲ್ಲ ಸರ್. ಆತನ ಅಂಗಿ ಹರಿದು ಪ್ಯಾಂಟ್ ಬಿಚ್ಚಿತ್ತು ಹೀಗಾಗಿ ಎನ್ನತೊಡಗಿದ. ಕುಡಿದ ವಾಸನೆ ಬರುತ್ತಿದ್ದ ಹಾಗೇ ನಡೀ ನೀ ಆ ಕಡೆ ಎಂದು ಗದರಿಸಿ, ಆತನನ್ನ ಕಳಿಸಲಾಯಿತು.

ಅದಾದ ಮರುದಿನ ಹಾಗೇ ಬಟ್ಟೆ ಹರಿದುಕೊಂಡು, ಪ್ಯಾಂಟ್ ಬಿಚ್ಚಿದ್ದ ವ್ಯಕ್ತಿ ಸಾವಿಗೀಡಾಗುತ್ತಾನೆ. ಸತ್ತ ನಂತರ ಆರಂಭವಾಗುವುದೇ ಪೊಲೀಸ್ ಬೇಟೆ. ಬಹುತೇಕರು ಇಂತಹದ್ದನ್ನ ಅದೇಲ್ಲೋ ಸಿನೇಮಾದಲ್ಲಿ ನೋಡಿರಬಹುದು ಅಂದುಕೊಳ್ಳುತ್ತೇವೆ. ಆದರೆ, ಹುಬ್ಬಳ್ಳಿಯಲ್ಲಿ ಸಿನೇಮಾ ರೀತಿಯ ದೃಶ್ಯಗಳು ಬಯಲಾಗತೊಡಗಿದವು.

ಅಲ್ಲಾಗಲೇ ಘಟನೆಯಲ್ಲಿ ತೀರಿಕೊಂಡವನು ಕೇಶ್ವಾಪುರ ಕಾಡಶಿದ್ಧೇಶ್ವರ  ಕಾಲೋನಿಯ ಆಟೋ ಚಾಲಕ ಸಾಗರ ಅಂಗಡಿ ಎಂದು ಗೊತ್ತಾಗಿತ್ತು. ಅಲ್ಲಿಂದ ಶುರುವಾಗಿದ್ದು ಯಾರಿಗೂ ಗೊತ್ತಾಗದ ಸತ್ಯಗಳು. ಓರ್ವ ಪೊಲೀಸ್ ಪೇದೆ ಈ ಪ್ರಕರಣದ ಬೆನ್ನು ಹತ್ತಿ ಹೊರಟಾಗ, ಅದೊಂದು ಸಿಸಿಟಿವಿ ದೃಶ್ಯ ಎಲ್ಲವನ್ನೂ ಬಯಲು ಮಾಡತೊಡಗಿತು. ಅಲ್ಲಿ ನಡೆಯುತ್ತಿದ್ದ ಜಗಳದಲ್ಲಿ ಕಂಡು ಬಂದಿದ್ದು ಬೇರಾರೂ ಅಲ್ಲ, ಅವತ್ತು ಹರಿದ ಅಂಗಿ ಮತ್ತು ಬಿಚ್ಚಿದ ಪ್ಯಾಂಟನ್ನ ನೋಡಿ ಅತ್ತಿಂದಿತ್ತ ಅಲೆಯುತ್ತಿದ್ದವ.

ಪೊಲೀಸ್ ತನಿಖೆಯ ಜಾಡೇ ಬದಲಾಯಿತು. ಆತ ಯಾರೂ, ಅವನನ್ನ ಎಲ್ಲಿಂದ ಹುಡುಕುವುದು ಎನ್ನುತ್ತಿದ್ದಾಗಲೇ, ಮೊದಲೇ ಎರಡು ದಿನದಿಂದ ಆತನ ಮೇಲೆ ನಿಗ್ರಾಣಿಯನ್ನ ಪೊಲೀಸ್ ಅಧಿಕಾರಿಯಿಟ್ಟಿದ್ದರು. ಈ ಕಡೆಯಿಂದ ಪೊಲೀಸ್ ಪೇದೆ, “ಸರ್, ಆತ ಸಾಯುವ ಮುನ್ನ ಜಗಳ ಮಾಡಿಕೊಂಡು ಅಂಗಿ ಹರಿದುಕೊಂಡಿದ್ದಾನೆ” ಎಂದು ಹೇಳಿದ. ಅಷ್ಟರಲ್ಲಿಯೇ ಅವತ್ತು ಗಾಯಾಳುವನ್ನ ಅಂಗಿ ಹರಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಿದ್ದು ನೆನಪಾಯಿತು.

ಅಚಾನಕ್ಕಾಗಿ ಕರೆದುಕೊಂಡು ಬಂದು ಕೂಡಿಸಿದ್ದ ವ್ಯಕ್ತಿಯನ್ನ ಮೊದ ಮೊದಲು ಕೇಳಿದಾಗ ಆತ ಏನನ್ನೂ ಒಪ್ಪಿಕೊಂಡಿಲ್ಲ. ಆಗ ಪೊಲೀಸ್ ರೀತಿಯಲ್ಲಿ ವಿಚಾರಣೆ ಆರಂಭವಾಗತ್ತೆ. ಆಗ ನಿಜವಾದ ಬಣ್ಣ ಬಯಲಾಗಿತ್ತು. ಅಸಹಜ ಸಾವೊಂದು ಕೊಲೆ ಎಂಬುದು ಪತ್ತೆಯಾಗಿತ್ತು.

ಆರೋಪಿ ಇಮ್ತಿಯಾಜ ನಡೆದದ್ದೇನು ಎಂಬುದನ್ನ ಹೇಳಿಕೊಂಡಿದ್ದು- ನಾನು ಸಾಗರ ಗೆಳೆಯರು. ಮಧ್ಯಾಹ್ನ ಕುಡಿದ ಸಮಯದಲ್ಲಿ ಇಬ್ಬರು ಕೂಡಿಕೊಂಡು ನನ್ನ ಹೊಡೆದಿದ್ದರು. ಅದೇ ಸಮಯದಲ್ಲಿ ನಾನೇ ಅವನ ಅಂಗಿಯನ್ನ ಹರಿದಿದ್ದೆ. ನನಗೆ ಹೊಡೆದಿದ್ದರಿಂದ ಸಂಜೆ ಆತನನ್ನ ಹೊಡೆಯಲು ಶಕ್ತಿ ಬಾರ್ ಗೆ ಕರೆದುಕೊಂಡು ಬಂದೆ. ಇಬ್ಬರು ಕುಡಿದ ನಂತರ ಸಾಗರನನ್ನ ಹೊಡೆಯಲು ಡ್ರೀಮ್ಸ್ ಪ್ಲಾಜಾದ ನೆಲಮಹಡಿಗೆ ಹೋಗಿ ಅವನಿಗೆ ಹೊಡೆದೆ. ಆತ ತಕ್ಷಣವೇ ಕೆಳಗೆ ಬಿದ್ದ. ತಲೆಗೆ ಬಲವಾದ ಪೆಟ್ಟು ಬಿತ್ತು. ನನಗೆ ಭಯವಾಗಿ ನಾನೇ 108 ಗೆ ಪೋನ್ ಮಾಡಿದೆ. ಆದರೆ, ಅವರು ಬರಲಿಲ್ಲ. ಅಷ್ಟರಲ್ಲಿ ನೀವೂ ಬಂದ್ರೀ. ನಾನು ಭಯದಿಂದ ಏನೂ ಹೇಳಲಿಲ್ಲ ಎಂದ.

ಅವತ್ತು ರೋಗಿಯನ್ನ ಆಸ್ಪತ್ರೆಗೆ ಸಾಗಿಸಿ, ಸಂಶಯದಿಂದ ಮೊದಲೇ ಆರೋಪಿಯನ್ನ ತಂದು ಕೂಡಿಸಿದ್ದು ಇನ್ಸಪೆಕ್ಟರ್ ಸುರೇಶ ಕುಂಬಾರ.

ಇದು ಅಸಹಜ ಸಾವಲ್ಲ, ಕೊಲೆಯ ಎಂದು ಬಲವಾಗಿ ಸಾಕ್ಷಿ ಹುಡುಕಿದ್ದು ಕೇಶ್ವಾಪುರ ಠಾಣೆಯ ಗುಳೇಶ.

ಈ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿ, ಕೊನೆಗೆ ಸತ್ಯ ಹೊರಬಿದ್ದಿದೆ. ಇಂತಹ ಪ್ರಕರಣವನ್ನ ಭೇದಿಸಿದ್ದು, ಹುಬ್ಬಳ್ಳಿ ಪೊಲೀಸರು ಎನ್ನುವುದು ಹೆಮ್ಮೆ ಕೂಡಾ. ಕಂಗ್ರಾಟ್ಸ್ ಪೊಲೀಸ್..


Spread the love

Leave a Reply

Your email address will not be published. Required fields are marked *