ಎಸ್ಪಿ ಕಂ ಡಿಸಿಪಿ ಮಾಸ್ಟರ್ ಪ್ಲಾನ್: ಕಳ್ಳ ಅಕ್ಕಿಗೆ ಬಿತ್ತು ರೇಡ್- ಪತರುಗುಟ್ಟಿದ ಪಡಿತರ ಚೋರರು
1 min readಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪ್ರಭಾರ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ಕೃಷ್ಣಕಾಂತ ಅವರ ಮಾಸ್ಟರ್ ಪ್ಲಾನ್ ಕ್ಲೀಕ್ಕಾಗಿದ್ದು, ಅಕ್ರಮ ದಗಾಕೋರರು ನಡೆಸುತ್ತಿದ್ದ ಬಹುದೊಡ್ಡ ದಂಧೆಯನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಹಲವು ವರ್ಷಗಳಿಂದ ಅವಳಿನಗರವೂ ಸೇರಿದಂತೆ ಧಾರವಾಡ ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾಳ ಸಂತೆಯ ಅಕ್ಕಿ ವ್ಯವಹಾರದ ಪ್ರಮುಖ ಗೋಡೌನಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನೂರಾರೂ ಕ್ವಿಂಟಾಲ್ ಪಡಿತರ ಅಕ್ಕಿಯ ಜೊತೆಗೆ ಲಾರಿಗಳನ್ನೂ ವಶಕ್ಕೆ ಪಡೆದಿದ್ದಾರೆ.
ಧಾರವಾಡದ ಎಪಿಎಂಸಿಯಲ್ಲಿರುವ ಶೇಖ ಎಂಬಾತನಿಗೆ ಸೇರಿದ 20ಕ್ವಿಂಟಾಲ್ ತುಂಬಿ ನಿಲ್ಲಿಸಿದ್ದ ಲಾರಿ, ನವನಗರದ ಎಪಿಎಂಸಿಯೊಳಗಿರುವ ಪ್ರಮುಖ ಅಕ್ಕಿ ಚೋರರ ಗೋಡೌನಗಳಿಗೆ ರೇಡ್ ಹಾಕಲಾಗಿದ್ದು, ಇನ್ನೂ ಹುಬ್ಬಳ್ಳಿಯ ವಿವಿಧ ಭಾಗಗಳಲ್ಲಿ ಮುಚ್ಚಿಟ್ಟಿರುವ ಗೋಡೌನಗೂ ದಾಳಿ ನಡೆದಿದೆ.
ಎರಡು ಕಡೆಯ ಮಾಹಿತಿಯನ್ನ ಕಲೆ ಹಾಕಿರುವ ಎಸ್ಪಿ ಕಂ ಡಿಸಿಪಿ ಪಿ.ಕೃಷ್ಣಕಾಂತ ಅವರು, ಚಾಣಾಕ್ಷತನದಿಂದ ಜಾಲವನ್ನ ಭೇದಿಸಿದ್ದಾರೆ. ಈಗಾಗಲೇ ದಾಳಿ ನಡೆದಿರುವ ಬಹುತೇಕ ಪ್ರದೇಶಗಳಲ್ಲಿ ಪೊಲೀಸರ ಕಾವಲು ಹಾಕಿ, ತನಿಖೆಯನ್ನ ಮುಂದುವರೆಸಿದ್ದು, ಇನ್ನೇನು ಸಂಪೂರ್ಣವಾದ ಮಾಹಿತಿ ಹೊರಬರಬೇಕಿದೆ.