ಸೋಜುಗದ ಸೂಜಿಮಲ್ಲಿಗೆ… ಗಾಯಕಿ ಅನನ್ಯಭಟ್ ತಂದೆ ಮರ್ಡರ್ ಕೇಸಲ್ಲಿ ಅರೆಸ್ಟ್..!
ಮೈಸೂರು: ನಿವೃತ್ತ ಉಪನ್ಯಾಸಕರನ್ನ ಏಳು ಲಕ್ಷ ರೂಪಾಯಿ ಕೊಟ್ಟು ಹತ್ಯೆ ಮಾಡಿಸಿರುವ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಭಟ್ ತಂದೆ ಬಂಧನವಾಗಿದ್ದು, ಕೊಲೆಗೆ ಕಿರುಕುಳವೇ ಕಾರಣ ಎಂದು ಗೊತ್ತಾಗಿದೆ. ಅನನ್ಯಭಟ್ ತಂದೆ ವಿಶ್ವನಾಥ್ ಭಟ್ 52 ಬಂಧನವಾಗಿದ್ದು, ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆಯನ್ನ 7 ಲಕ್ಷಕ್ಕೆ ಸುಪಾರಿ ನೀಡಿ ಮಾಡಿಸಲಾಗಿದ್ದು, ಇದಕ್ಕಾಗಿ ಇಬ್ಬರನ್ನು ವಿಶ್ವನಾಥ್ ಭಟ್ ಬಳಸಿಕೊಂಡಿದ್ದ.
ವಿಶ್ವನಾಥ್ ಭಟ್‌ಗೆ ಸಹ ಶಿಕ್ಷಕ ಪರಶಿವ ಹಾಗೂ ಸ್ನೇಹಿತ್ ಸಿದ್ದರಾಜು ಸಾಥ್ ನೀಡಿದ್ದು, ನಿರಂಜನ್ ನಾಗೇಶ್ ಎಂಬ ಹಂತಕ ಸುಪಾರಿ ಪಡೆದು ಕೊಲೆ ಮಾಡಿದ್ದಾರೆ. 20/09/2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಕೊಲೆಯಾಗಿತ್ತು. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಹತ್ಯೆಯ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನ ಪತ್ತೆ ಮಾಡಿದ್ದಾರೆ.
ಕೊಲೆಗೆ ಪರಶಿವಮೂರ್ತಿಯ ಟಾರ್ಚರ್ ಕಾರಣವೆಂದು ಹೇಳಲಾಗಿದೆ. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಕೊಲೆಯಾದ ಪರಶಿವಮೂರ್ತಿ. ಪ್ರತಿ ತಿಂಗಳು ಕಮಿಷನ್‌ಗಾಗಿ ಹತ್ಯೆಯಾದ ವ್ಯಕ್ತಿ ಪೀಡಿಸುತ್ತಿದ್ದರು. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಅನನ್ಯಭಟ್ ತಂದೆ ವಿಶ್ವನಾಥ್ ಭಟ್‌ರಿಂದ ಕೊಲೆಗೆ ಸುಪಾರಿ ನೀಡಲಾಗಿತ್ತು.
ವಿಶ್ವನಾಥ ಭಟ್ ಎರಡು ವರ್ಷಗಳಿಂದ ಅನನ್ಯಭಟ್‌ರಿಂದ ದೂರವಿದ್ದು, ಪತ್ನಿ ಮಗಳನ್ನು ಬಿಟ್ಟು ಬೇರೆಯಾಗಿರುವ ಆರೋಪಿ ವಿಶ್ವನಾಥ್ ಭಟ್.