ಯಮನೂರಲ್ಲಿ ಬಹುದೊಡ್ಡ ಅವಘಡ- ತನ್ನಿಬ್ಬರು ಗಂಡು ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಗೊಂಡಬಾಳದ “ನತದೃಷ್ಟ ತಾಯಿ”…

Exclusive
ಹೆತ್ತ ಮಕ್ಕಳಿಗೆ ಅನ್ನದಲ್ಲಿ ವಿಷ ಹಾಕಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ಹುಬ್ಬಳ್ಳಿ: ಹೆತ್ತ ತಾಯಿಯೊಬ್ಬಳು ಎರಡು ಮಕ್ಕಳಿಗೆ ವಿಷ ಉಣಿಸಿ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮೂವರು ಅಶ್ವಸ್ಥಗೊಂಡು ಕಿಮ್ಸ್ ಆಸ್ಪತ್ರೆಗೆ ದಾಖಲಾದ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಸುಕ್ಷೇತ್ರ ಯಮನೂರು ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮದ 32 ವರ್ಷದ ಮಾಲಾ ಎಂಬಾಕೆ ತನ್ನೆರಡು ಗಂಡು ಮಕ್ಕಳ ಜೊತೆ ನವಲಗುಂದ ತಾಲ್ಲೂಕಿನ ಯಮನೂರು ಗ್ರಾಮದ ಚಾಂಗ ದೇವ ಜಾತ್ರೆಗೆ ಬಂದಿದ್ದ ಮಹಿಳೆ,ದರ್ಶನ ಪಡೆದು ಸಾಯಂಕಾಲ ಮಕ್ಕಳು ಊಟ ಮಾಡುವಾಗ ಅನ್ನದಲ್ಲಿ ಕ್ರಿಮಿನಾಶಕ ಬೆರೆಸಿ ಊಟ ಮಾಡಿಸಿ ತಾನು ಕೂಡ ವಿಷ ಸೇವಿಸಿ ಯತ್ನಿಸಿದ್ದಾಳೆ.
https://www.facebook.com/share/v/16NxzGxf6n/
ವಿಷ ಸೇವಿಸಿದ ಬಳಿಕ ಮಕ್ಕಳ ಹಾಗೂ ಮಹಿಳೆಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಸ್ಥಳೀಯರು ಮಹಿಳೆಯನ್ನು ಕೇಳಿದಾಗ ಮಹಿಳೆ ಮಕ್ಕಳಿಗೆ ವಿಷ ಸೇವಿಸಿ ತಾನು ಕ್ರಿಮಿನಾಶಕ ಸೇವಿಸಿರೋ ಮಾಹಿತಿಯನ್ನು ಹೇಳಿದ್ದಾಳೆ. ಕೂಡಲೇ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿಯನ್ನು ನೀಡಿ ಮಹಿಳೆಯನ್ನು ಹಾಗೂ ಮಕ್ಕಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಸದ್ಯ ಅಶ್ವಸ್ಥ ಗೊಂಡ ಮಹಿಳೆ ಹಾಗೂ ಎರಡು ಮಕ್ಕಳಿಗೆ ಹುಬ್ಬಳ್ಳಿಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೇ. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮಹಿಳೆ ಯಾವ ಕಾರಣಕ್ಕಾಗಿ ವಿಷ ಸೇವಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿಲ್ಲ.