ಧಾರವಾಡ: ಅರಣ್ಯ ಇಲಾಖೆಯ “ಮಹಾ ಭಂಡತನ” ಬಯಲು- ಸಚಿವರನ್ನೂ “ದಾರಿ” ತಪ್ಪಿಸಿದ ಮಹಾನುಭಾವರ ನಿಜ ಸತ್ಯ ಬಹಿರಂಗ….!!!

ಧಾರವಾಡ: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿನ ನೂರಾರೂ ಮರಗಳನ್ನ ಕಡಿದು ಅನಧಿಕೃತ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಡವಟ್ಟನ್ನ ಮಾಡಿಕೊಂಡು ಮುನ್ನಡೆಯುತ್ತಿದ್ದು, ಇದರ ಸತ್ಯವನ್ನ ದಾಖಲೆಗಳ ಸಮೇತ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಹೊರ ಹಾಕಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಉದ್ದೇಶಪೂರ್ವಕವಾಗಿರುವ ಯಡವಟ್ಟು ಹೆಂಗಿದೆ ಅಂದರೇ, ಜಪ್ತಿ ಮಾಡಿರುವ ಟ್ರ್ಯಾಕ್ಟರ್ ಸಂಖ್ಯೆ ಅದರದ್ದೂ ಅಲ್ಲವೇ ಅಲ್ವಂತೆ.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರಿಗೂ ಅರಣ್ಯ ಇಲಾಖೆಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದರಿಂದ, ಅವರು ಅದನ್ನೇ ನಂಬಿ ಹೇಳಿಕೆ ಕೊಟ್ಟಿದ್ದಾರೆ.
ಬಡವರ ಮಗನೆಂದೆ ಖ್ಯಾತಿ ಪಡೆದಿರುವ ಬಸವರಾಜ ಕೊರವರ ಅವರು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಚ್ಚುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಬಹುದೊಡ್ಡ “ಆವಾಂತರ” ಹೊರ ಬೀಳುವುದು ನಿಶ್ಚಿತವಾಗಿದೆ.