ಧಾರವಾಡ ಫಾರೆಸ್ಟ್ ಲಫಡಾ- ಹೊಸ ಕಥೆ ಸೃಷ್ಟಿಗೆ ಸಿದ್ಧಗೊಂಡಿತು ವೀಡಿಯೋ… ‘ಪಟ…ಪಟ…ಪರಿ…’

ಧಾರವಾಡ: ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ನೂರಾರೂ ಮರಗಳನ್ನ ಕಡಿದು, ಏನೂ ಆಗಿಯೇ ಇಲ್ಲವೆಂಬಂತೆ ವಾತಾವರಣ ಸೃಷ್ಟಿಸಲು ಹೆಣಗಾಟದ ಪರಿಣಾಮ ಇವತ್ತೊಂದು ಹೊಸದೊಂದು ವೀಡಿಯೋ ಸೃಷ್ಟಿಯಾಗಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ.
ಹೌದು… ಮಾಡಿರುವ ಪ್ರಮಾದ ಮುಚ್ಚಿಕೊಳ್ಳಲು ಶಾಣ್ಯಾ ಮಹಿಳಾ ಅಧಿಕಾರಿಯೋರ್ವರು ಕೆಲವು ಗ್ರಾಮಸ್ಥರನ್ನ “ಲೂಟಿ” ಮಾಡಿದ ಸ್ಥಳದಲ್ಲಿ ನಿಲ್ಲಿಸಿಕೊಂಡು ನಿರ್ದೇಶನ ನೀಡಿ, ಸರಕಾರದ ಕಣ್ಣಿಗೆ ಸುಣ್ಣ ಬಳಿಯುವ ಪ್ರಯತ್ನ ನಡೆದಿದೆ ಎಂದು ಹೇಳಲಾಗುತ್ತಿದೆ.
ಅಪರೂಪದ ವೀಡಿಯೋ…
ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ಈಗಾಗಲೇ ಈ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನ ಕಲೆ ಹಾಕಿದ್ದು, ಅಧಿಕಾರಿಗಳ ಸಮೇತ ಹಲವರ ವಿರುದ್ಧ ದೂರು ದಾಖಲಿಸುವ ಸಾಧ್ಯತೆಯಿದೆ.