ಮಂತ್ರಿ ಸ್ಥಾನದ ಬೇಡಿಕೆ ನಾನಿಟ್ಟಿಲ್ಲ: ಶಾಸಕ ಮುನೇನಕೊಪ್ಪ
1 min readಹುಬ್ಬಳ್ಳಿ: ಕೊರೋನಾ ಪಾಸಿಟಿವ್ ನಿಂದ ಗುಣಮುಖವಾದ ಮೇಲೆ ಮೊದಲ ಬಾರಿಗೆ ಬೆಂಗಳೂರಿಗೆ ಹೋಗಿದ್ದೆ. ಅದೇ ಕಾರಣಕ್ಕೆ ಸಿಎಂ ಯಡಿಯೂರಪ್ಪ ಸೇರಿದಂತೆ ಹಲವರನ್ನ ಭೇಟಿಯಾಗಿದ್ದೇನೆ. ಹಾಗೆಂದ ಮಾತ್ರಕ್ಕೆ ನಾನು ಮಂತ್ರಿಗಿರಿಗಾಗಿ ಬೇಡಿಕೆ ಈಡುತ್ತಿದ್ದೇನೆ ಎನ್ನುವುದು ಸರಿಯಲ್ಲ ಎಂದು ನವಲಗುಂದ ಶಾಸಕ ಹಾಗೂ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷ ಶಂಕರ ಪಾಟೀಲಮುನೇನಕೊಪ್ಪ ಹೇಳಿದ್ದಾರೆ.
ರಾಜಧಾನಿಯಲ್ಲಿ ಸಿಎಂ ಅಲ್ಲದೇ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ರಮೇಶ ಜಾರಕಿಹೊಳಿ ಜೊತೆಗೂ ಭೇಟಿಯಾಗಿ ಸಭೆ ನಡೆಸಿದ್ದು ಸತ್ಯ. ಆದರೆ, ಅದು ಕೇವಲ ಕ್ಷೇತ್ರದ ಅಭಿವೃದ್ಧಿಗಾಗಿ ನಡೆದಿರುವುದು. ಅಲ್ಲಿ ಮಂತ್ರಿಗಿರಿಯ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ.
ಕಳೆದ ಹಲವು ದಿನಗಳಿಂದ ಕೊರೋನಾ ಪಾಸಿಟಿವ್ ಬಂದು ಅನಾರೋಗ್ಯ ಕಾಡಿತ್ತು. ಹಾಗಾಗಿ ಕ್ಷೇತ್ರದ ಸಮಾಜದ ಹಲವು ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಅವುಗಳನ್ನ ಆದಷ್ಟು ಬೇಗನೇ ಸರಿ ಮಾಡಿಸಬೇಕೆಂಬ ಉದ್ದೇಶದಿಂದಲೇ ತಾವೂ ಸಭೆಗಳಲ್ಲಿ ಭಾಗವಹಿಸಿದ್ದೆಂದು ಹೇಳಿದ್ದಾರೆ.
ಸಚಿವ ಸಂಪುಟದ ತೀರ್ಮಾನಗಳನ್ನ ಹೈಕಮಾಂಡ ತೆಗೆದುಕೊಳ್ಳುತ್ತಾರೆ. ಸಿಎಂ ಹಾಗೂ ಇನ್ನುಳಿದವರ ವಿವೇಚನೆಗೆ ಬಿಟ್ಟಿದ್ದು. ಅವರುಗಳು ತೆಗೆದುಕೊಂಡ ತೀರ್ಮಾನಕ್ಕೆ ತಾವು ಬದ್ಧ ಎಂದು ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.